ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ಸ್ಥಳೀಯ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರಾದ ಕೀರ್ತಿ ಪೂಜಾರ ಜೊತೆಗೆ ಕಾವ್ಯ ಹಾಗೂ ಕವಿತಾ ಕೀರ್ತಿ ತರುವ ಮೂಲಕ ಒಂದೇ ಅಕ್ಷರದಿಂದ ಪ್ರಾರಂಭವಾಗುವ ಮೂವರು ಪ್ರಥಮ ಹಾಗು ದ್ವೀತಿಯ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಕೀರ್ತಿ ಪೂಜಾರ 625 ಅಂಕಗಳಿಗೆ 619 ಅಂಕಗಳನ್ನು ಪಡೆಯುವ ಮೂಲಕ (ಶೇ, 99.04%) ತಾವರಗೇರಾ ಹೋಬಳಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಅದೇ ರೀತಿ ಕವಿತಾ 625 ಅಂಕಗಳಿಗೆ 613 ಅಂಕಗಳನ್ನು ಪಡೆಯುವ ಮೂಲಕ ಶೇ 98.08%, ಅದೇ ರೀತಿ ಕಾವ್ಯ ಎಂಬ ವಿದ್ಯಾರ್ಥಿನಿ ಕೂಡ 625 ಅಂಕಗಳಿಗೆ 613 ಅಂಕಗಳನ್ನು ಪಡೆದುಕೊಂಡು ಶೇ, 98.08% ಪಡೆಯುವ ದ್ವೀತಿಯ ಸ್ಥಾನ ವನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ.
ಇದೇ ಶಾಲೆಯ ವಿದ್ಯಾರ್ಥಿನಿಗಳಾದ ಭೂಮಿಕಾ 625 ಅಂಕಗಳಿಗೆ 611 ಅಂಕಗಳನ್ನು ಪಡೆಯುವ ಮೂಲಕ (ಶೇ 97.86%) ತೃತೀಯ ಸ್ಥಾನ ಪಡೆದುಕೊಂಡಿದ್ದು, ರಾಜೇಶ್ವರಿ 625 ಅಂಕಗಳಿಗೆ 605 ಅಂಕಗಳನ್ನು ಪಡೆದುಕೊಂಡು( ಶೇ96.80%), ನಾಲ್ಕನೇ ಸ್ಥಾನ ಪಡೆದುಕೊಂಡರೇ, ನೇತ್ರಾವತಿ 625 ಅಂಕಗಳಿಗೆ 600 ಅಂಕಗಳನ್ನು ಪಡೆಯುವ ಮೂಲಕ (ಶೇ 96%) ಐದನೇ ಸ್ಥಾನ ಪಡೆಯುವ ಮೂಲಕ ತಾವರಗೇರಾ ಕ್ಕೆ ಕೀರ್ತಿ ತಂದಿದ್ದಾರೆ. ಕಿತ್ತೂರ ರಾಣಿ ಚೆನ್ನಮ್ಮ ಶಾಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಶೇ 98.04% ರಷ್ಟು ಫಲಿತಾಂಶ ಬಂದಿರುವುದು ಕುಷ್ಟಗಿ ತಾಲೂಕಿನ ಹೆಮ್ಮೆಯ ವಿಷಯವಾಗಿದೆ.
ಈ ಕುರಿತಂತೆ ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಂದ್ರ ಕಾಂಬಳೆ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಚಾರ್ಯರಾದ ನಾಗರಾಜ ಸಂಗನಾಳ ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.