Friday , September 20 2024
Breaking News
Home / Breaking News / ಕುಷ್ಟಗಿಯಲ್ಲಿ ಇತಿಹಾಸ ನಿರ್ಮಿಸುವವರು ಯಾರು..!?

ಕುಷ್ಟಗಿಯಲ್ಲಿ ಇತಿಹಾಸ ನಿರ್ಮಿಸುವವರು ಯಾರು..!?

 

 

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ:- ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಾಮುಖಿ ಇದ್ದು, ಈ ಬಾರಿ ಇತಿಹಾಸ ನಿರ್ಮಾಣ ಮಾಡುತ್ತೆನೆಂದು ಶಾಸಕ ಬಯ್ಯಾಪೂರ ಹೇಳಿದರೇ, ಈ ಬಾರಿ ಗೆಲುವು ನನ್ನದೇ ಎಂದು ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಪ್ರಚಾರದ ಸಂದರ್ಭದಲ್ಲಿ ಹೇಳುತ್ತಿರುವುದು, ಕ್ಷೇತ್ರದಾದ್ಯಂತ ಕಂಡು ಬರುತ್ತಿದೆ.

ಅಭಿವೃದ್ಧಿ ಯ ಮೂಲ ಮಂತ್ರದೊಂದಿಗೆ ಹಾಗೂ ಜನರ ನಿರಂತರ ಸಂಪರ್ಕದ ಜೊತೆಗೆ ಕೊರೊನಾ ಸಂದರ್ಭದಲ್ಲಿ ಕ್ಷೇತ್ರದಾದ್ಯಂತ ಸಂಚರಿಸಿ ಸ್ಪಂದನೆ ನೀಡಿರುವುದು ನನ್ನ ಗೆಲುವಿಗೆ ಕಾರಣವಾಗಿ ಇತಿಹಾಸ ನಿರ್ಮಿಸುತ್ತೆನೆ ಎಂಬ ವಿಶ್ವಾಸದಲ್ಲಿ ಬಯ್ಯಾಪೂರ ಇದ್ದರೇ,

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ರಾಜ್ಯ ಸರ್ಕಾರದ ಯೋಜನೆಯ ಜೊತೆಗೆ ಸ್ವ ಜಾತಿಯ ಮತಗಳನ್ನೆ ಹೆಚ್ಚಾಗಿ ನಂಬಿಕೊಂಡಿದ್ದು ಮತ್ತು ಬಿಜೆಪಿ ಸಾಂಪ್ರದಾಯಿಕ ಮತಗಳ ಕ್ರೋಡಿಕರಣದಿಂದಾಗಿ ಹಾಗೂ ಹಲವು ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿ ಯತ್ತ ಮುಖಮಾಡಿರುವುದು ಕೂಡ ದೊಡ್ಡನಗೌಡ ಪಾಟೀಲ್ ರಿಗೆ ಬಲ ಬಂದಂತಾಗಿದೆ , ಈ ಬಾರಿ ಅಧಿಕ ಮತಗಳ ಅಂತರದಿಂದ ಜಯಭೇರಿ ಬಾರಿಸಿ ಇತಿಹಾಸ ಬರೆಯುತ್ತೇನೆ ಎಂಬ ಆತ್ಮ ವಿಶ್ಚಾಸದಲ್ಲಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಇದ್ದು, ಯಾರೇ ಗೆದ್ದರು ಕೂಡಾ ಕಡಿಮೆ ಮತಗಳ ಅಂತರದಿಂದ ಗೆಲ್ಲಲಿದ್ದಾರೆಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಅದರಂತೆ ಚುನಾವಣಾ ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿ ಶರಣಪ್ಪ ಕುಂಬಾರ ತಮ್ಮ ಜನಾಂಗದ ಜೊತೆಗೆ ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿ, ಮತ ಪಡೆಯಲಿದ್ದಾರೆ, ಅದೇ ರೀತಿಯಾಗಿ ಕೆಆರ್ ಪಿಪಿ ಅಭ್ಯರ್ಥಿ ಸಿ ಎಮ್ ಹಿರೇಮಠ, ಹಾಗೂ ಪಕ್ಷೇತರ ಅಭ್ಯರ್ಥಿ ವಜೀರ ಅಲಿ ಗೋನಾಳ ಸೇರಿದಂತೆ ಕಣದಲ್ಲಿರುವ ಅಭ್ಯರ್ಥಿಗಳ ಮಧ್ಯೆ ಮತಗಳು ಹಂಚಿ ಹೊಗುವದರಿಂದಾಗಿ ತೀವ್ರ ಜಿದ್ದಾ ಜಿದ್ದಿಯಲ್ಲಿರುವ ಬಯ್ಯಾಪೂರ ಹಾಗೂ ದೊಡ್ಡನಗೌಡ ಪಾಟೀಲ್ ಇವರಿಬ್ಬರಲ್ಲಿ ಯಾರೇ ಸೋಲು ಕಂಡರು ಕೂಡ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು ಪಡೆದುಕೊಳ್ಳುವ ಮತಗಳ ಮೇಲೆ ನಿರ್ಣಾಯಕವಾಗುವದರ ಜೊತೆಗೆ ಜಯದಲ್ಲಿ ಕೂಡ ಪ್ರಮುಖ ಪಾತ್ರ ವಹಿಸಲಿವೆ‌.
ಏನೇ ಆಗಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಈ ಬಾರಿಯ ಫಲಿತಾಂಶ ಯಾರೇ ಜಯಕಂಡರು ಕೂಡ ಅದು ಒಂದು ಇತಿಹಾಸ ವಾಗಲಿದೆ , ಯಾವುದಕ್ಕು ಮತದಾರ ಪ್ರಭುಗಳು ನೀಡುವ ಫಲಿತಾಂಶ ಕಾದು ನೋಡಬೇಕಾಗಿದೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!