ವರದಿ ಎನ್ ಶಾಮೀದ್ ತಾವರಗೇರಾ
ಕುಷ್ಟಗಿ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕ್ಷೇತ್ರದಾದ್ಯಂತ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿದ್ದು, ಜೊತೆ ಜೊತೆಗೆ ಎರಡು ಪಕ್ಷಗಳಿಂದಲೂ ಕೂಡ ಪಕ್ಷಾಂತರ ಪವ೯ ಪ್ರಾರಂಭವಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಅಮರೇಗೌಡ ಪಾಟೀಲ್ ಬಯ್ಯಾಪುರ ಹಾಗೂ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಎಚ್ ಪಾಟೀಲ್ ಕ್ಷೇತ್ರದಲ್ಲಿ , ಮತ ಕೇಳುವುದರ ಜೊತೆಗೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಸೆಳೆಯುವಲ್ಲಿ ತಮ್ಮದೇ ಆದ ತಂತ್ರಗಾರಿಕೆಯನ್ನು ರೂಪಿಸುತ್ತಿದ್ದಾರೆ, ಅದರಂತೆ ಕೆಲ ಕಾರ್ಯಕರ್ತರು ಕೂಡ ಒಮ್ಮೆ ಕಾಂಗ್ರೆಸ್ ನವರೊಂದಿಗೆ ಗುರುತಿಸಿಕೊಂಡರೆ, ಅದೇ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಅವರು ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ, ಅದರಲ್ಲೂ ತಾವರಗೇರಾ ಭಾಗದ ಮುಸ್ಲಿಂ ನಾಯಕರಾದ ನಾದೀರ ಪಾಷಾ ಮುಲ್ಲಾ, ಪಪಂ ಮಾಜಿ ಸದಸ್ಯ ಅಯೂಬಖಾನ ಪಠಾಣ್ ಸೇರಿದಂತೆ ಇನ್ನಿತರ ಮುಸ್ಲಿಂ ಮುಖಂಡರು ಹಾಗೂ ಹಾಲುಮತ ಸಮಾಜದ ಮುಖಂಡರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಶೇಖರಗೌಡ ಪೊಲೀಸ್ ಪಾಟೀಲ್, ಡಾ, ಕೆ ಬಸವರಾಜ, ವೀರಭದ್ರಪ್ಪ ನಾಲತವಾಡ, ಮಲ್ಲನಗೌಡ ಓಲಿ, ಬಿಜೆಪಿ ತಾಲೂಕ ಅಧ್ಯಕ್ಷ ಬಸವರಾಜ ಹಳ್ಳುರ, ಸಾಗರ ಭೇರಿ, ಶಿವರಾಜ ಗೌಡ ಪೊಲೀಸ್ ಪಾಟೀಲ್, ಮಂಜುನಾಥ ಜೂಲಕುಂಟಿ, ಬಸನಗೌಡ ಓಲಿ, ಮಲ್ಲಪ್ಪ ಬಳೂಟಗಿ, ರಮೇಶ ಗಿರಣಿ, ಶಿವನಗೌಡ ಪುಂಡಗೌಡ್ರು, ಶಾಮೂರ್ತಿ ಅಂಚಿ, ರಾಘವೇಂದ್ರ ತೆಮ್ಮಿನಾಳ, ಶೇಖರಪ್ಪ ನಾಲತವಾಡ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
ಪಕ್ಷ ಸೇರ್ಪಡೆ:- ಕುಷ್ಟಗಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಸಮ್ಮುಖದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಬಸನಗೌಡ ಪೊಲೀಸ್ ಪಾಟೀಲ್ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹಸನಸಾಬ ದೋಟಿಹಾಳ, ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ನಾಲತವಾಡ, ವಕೀಲರಾದ ಅಮರೇಗೌಡ ಪಾಟೀಲ್ ನವಲಹಳ್ಳಿ, ವಿರೇಶ ನಾಲತವಾಡ ಉಪಸ್ಥಿತರಿದ್ದರು.