ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ದೇವರ ದರ್ಶನಕ್ಕೆಂದು ಹೋದವರು ಮರಳಿ ಬಾರದೂರಿಗೆ ಹೋಗಿರುವುದು ಒಂದು ದುರಂತವೇ ಸರಿ ಅದರಲ್ಲೂ ಒಂದೇ ಕುಟುಂಬದ ಮೂರು ಜನರ ದಾರುಣ ಸಾವು ಪಟ್ಟಣದ ಸಮಸ್ತ ಜನತೆಯಲ್ಲಿ ಕೂಡ ದುಃಖದ ವಾತಾವರಣವನ್ನು ನಿರ್ಮಿಸಿದೆ. ಇದು ಪಟ್ಟಣದ ಹತ್ತನೇ ವಾರ್ಡಿನ ನಿವಾಸಿಗಳಾದ ಒಂದೇ ಕುಟುಂಬದ ಮೂರು ಜನರು ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತ ಪಟ್ಟ ಘಟನೆಗೆ ಸಾಕ್ಷಿಯಾಗಿದೆ.
ಪಟ್ಟಣದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಇಂಥದೊಂದು ಘಟನೆ ನಡೆದಿರುವುದು ಇದೇ ಮೊದಲು ಎಂದು ಸಾರ್ವಜನಿಕರು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಕುಟುಂಬ ಸಮೇತ ದೇವರ ದರ್ಶನಕ್ಕೆ ಎಂದು ತೆರಳಿದ 10ನೇ ವಾರ್ಡಿನ ನಿವಾಸಿಗಳಾದ, ಶಾಮೀದ್ ಸಾಬ್, ಮೌಲಾಸಾಬ್, ಇಮಾಮಬಿ, ಭಾನುವಾರದಂದು ನಡೆದ ರಸ್ತೆ ಅಪಘಾತದಲ್ಲಿ ಈ ಮೂರು ಜನರ ದುರ್ಮರಣ ಇಡೀ ಪಟ್ಟಣದ ಜನರಲ್ಲಿ ದುಃಖ ತರಿಸುವಂತಾಗಿದ್ದು ಇಂಥ ದುರ್ಘಟನೆ ನಡೆಯಬಾರದಿತ್ತು ಎಂದು ಮುಸ್ಲಿಂ ಜನಾಂಗ ಸೇರಿದಂತೆ ಎಲ್ಲಾ ಪಟ್ಟಣದ ಜನತೆ ಕೂಡ ಈ ಘಟನೆ ಯಿಂದಾಗಿ ದುಃಖದಲ್ಲಿ ಮುಳುಗಿರುವುದು ಕಂಡು ಬಂತು,
ಅದರಲ್ಲೂ ಏಕಕಾಲಕ್ಕೆ ಮೂರು ಜನರ ಶವಸಂಸ್ಕಾರ ಯಾತ್ರೆಗೆ ಪಟ್ಟಣದ ಜನತೆ ಸಾಕ್ಷಿಯಾಗಿರೋದು ಇದೇ ಮೊದಲಾಗಿದೆ ಇಂತಹ ಒಂದು ಘಟನೆ ನಡೆದಿರುವುದು ಸಮಸ್ತ ನಾಗರಿಕರ ಮನ ಕಲಕುವಂತಿತ್ತು ದೇವರ ಆಟ ಬಲ್ಲವರಾರು ಆಡಿಸಿದಾತನ ಆಟದ ಮುಂದೆ ಏನು ನಡೆಯಿದು ಪವಿತ್ರ ರಂಜಾನ್ ಹಬ್ಬದ ತಿಂಗಳಲ್ಲಿ ಅಲ್ಲಾನು ಈ ಕುಟುಂಬಕ್ಕೆ ಕೃಪೆ ತೊರಲಿಲ್ಲ, ಈ ಘಟನೆ ನಡೆದಿರುವುದು ಕುಟುಂಬ ಹಾಗೂ ಸಮಸ್ತ ಮುಸಲ್ಮಾನ ಹಾಗೂ ಹಿಂದೂ ಬಂಧುಗಳಿಗೆ ಮರೆಯಲಾಗದ ಘಟನೆಯಾಗಿದೆ.