Thursday , September 19 2024
Breaking News
Home / Breaking News / ತಾವರಗೇರಾ:- ಇಸ್ಪೀಟ್ ಜೂಜಾಟ 7 ಜನರ ಬಂಧನ..!

ತಾವರಗೇರಾ:- ಇಸ್ಪೀಟ್ ಜೂಜಾಟ 7 ಜನರ ಬಂಧನ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:– ಸಮೀಪದ ನವಲಹಳ್ಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 7 ಜನ ಆರೋಪಿತರನ್ನು ಬಂಧಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಸ್ಥಳೀಯ ಠಾಣೆಯ ಪಿಎಸ್ ಐ ತಿಮ್ಮಣ್ಣ ನಾಯಕ ಹಾಗೂ ಸಿಬ್ಬಂದಿ ವರ್ಗ ದಾಳಿ ನಡೆಸಿ 7 ಜನರನ್ನು ಬಂಧಿಸಿ ಉಳಿದ 3 ಜನರು ಪರಾರಿ ಯಾಗಿದ್ದು ಆರೋಪಿತನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಆರೋಪಿಗಳಿಂದ 26720 ರೂ ನಗದು ಹಾಗೂ ಇಸ್ಪಿಟ್ ಎಲೆಗಳನ್ನು ವಶ ಪಡಿಸಿಕೊಂಡಿದ್ದು ತಪ್ಪಿಸಿಕೊಂಡಿರುವ ಮೂವರು ಆರೋಪಿತರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪಿಎಸ್ ಐ ತಿಮ್ಮಣ್ಣ ನಾಯಕ ತಿಳಿಸಿದ್ದಾರೆ.
ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!