Thursday , September 19 2024
Breaking News
Home / Breaking News / ತಾವರಗೇರಾ: ಕೋತಿ ದಾಳಿ, ಬಾಲಕರಿಬ್ಬರಿಗೆ ಗಾಯ..!

ತಾವರಗೇರಾ: ಕೋತಿ ದಾಳಿ, ಬಾಲಕರಿಬ್ಬರಿಗೆ ಗಾಯ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಮಂಗವೊಂದು(ಕೋತಿ) ಚಿಕ್ಕ ಮಕ್ಕಳಿಬ್ಬರಿಗೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದ ಘಟನೆಯೊಂದು ಜರುಗಿದೆ.

ಸಮೀಪದ ಹಿರೇಮುಕರ್ತನಾಳ ಗ್ರಾಮದಲ್ಲಿ ಘಟನೆ ಜರುಗಿದ್ದು ಗಾಯಗೊಂಡ ಬಾಲಕರಿಬ್ಬರು ಅದೇ ಗ್ರಾಮದ ಎರಡು ವರ್ಷದ ಮನ್ವೀತ್ ಹಾಗೂ ಗಣೇಶ ಎಂದು ಗುರುತಿಸಲಾಗಿದೆ ,

ಕಳೆದ ಒಂದು ವಾರದಿಂದ ಕೆಂಪು ಕೋತಿಯೊಂದು ಗ್ರಾಮದಲ್ಲಿ ಕಾಣಿಸಿಕೊಂಡಿದ್ದು ಮನೆಯ ಮುಂದೆ ತೊಟ್ಟಿಲಿನಲ್ಲಿ ಮಲಗಿದ್ದ ಮಕ್ಕಳ ಕಾಲಿಗೆ ಹಾಗೂ ತಲೆಗೆ ಕಚ್ವಿ ಗಾಯಗೊಳಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಗ್ರಾಮಸ್ಥರು ಆತಂಕಗೊಂಡಿದ್ದು ಮುಂದೆ ಈ ರೀತಿ ಘಟನೆ ಜರುಗದಂತೆ ಅರಣ್ಯ ಇಲಾಖೆಯವರು ಗಮನಹರಿಸಿ ಕೋತಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!