ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ; ನಾನು ವಿರೋಧ ಪಕ್ಷದಲ್ಲಿದ್ದರೂ ಕೂಡ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಅನುದಾನಗಳನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದೇನೆ ಅದರ ಪ್ರತಿಫಲವಾಗಿ ಮತದಾರರು ನನಗೆ ಮತದಾನದ ಮೂಲಕ ಕೂಲಿ ನೀಡಬೇಕೆಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.
ಅವರು ಶುಕ್ರವಾರದಂದು ಕಾರ್ಯಕರ್ತರಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳನ್ನು ವಿತರಿಸುವ ಮೂಲಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು, ಚುನಾವಣೆ ಸಂದರ್ಭದಲ್ಲಿ ಯುವಕರು ಯೋಚಿಸಿ ಮತ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತು ರಾಜ್ಯದ ಏಳಿಗೆಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ತರುವಲ್ಲಿ ಯಶಸ್ವಿಯಾಗಬೇಕು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹಲವಾರು ಯೋಜನೆಗಳನ್ನು ಮುಂದುವರೆಸುವ ಮೂಲಕ ಈ ಬಾರಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಹಾಲುಮತ, ಭೋವಿ, ಯಾದವ ಸಮಾಜದವರು, ಯುವ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು ಈ ಸಂದರ್ಭದಲ್ಲಿ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ನಾಲತವಾಡ, ರುದ್ರಗೌಡ ಕುಲಕರ್ಣಿ, ಬಸನಗೌಡ ಮಾಲಿ ಪಾಟೀಲ್ , ಸೋಮನಗೌಡ ಪಾಟೀಲ್, ವೀರೇಶ್ ನಾಲತವಾಡ, ಮಹಿಳಾ ಮುಖಂಡರಾದ ಶಶಿಕಲಾ ಬಿಳೆಗುಡ್ಡ, ಬೇಬಿ ರೇಖಾ ಉಪ್ಪಳ, ಶೈಲಜಾ ದೇವರೆಡ್ಡಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ಅಮರೇಶ ಗಾಂಜಿ ಕಾರ್ಯಕ್ರಮ ನಿರೂಪಿಸಿದರು.
ಪಕ್ಷ ಸೇರ್ಪಡೆ:- ಹನುಮಂತಪ್ಪ ಮದ್ದಿನ್ ನೇತೃತ್ವದಲ್ಲಿ ಶಾಮಣ್ಣ ಗುಂಡೂರ್, ಸಿದ್ದನಗೌಡ ಪುಂಡ ಗೌಡ್ರು, ಶಾಮನಗೌಡ ಪುಂಡ ಗೌಡ್ರು, ರಾಮಣ್ಣ ಪುಂಡ ಗೌಡ್ರು, ಮಂಜುನಾಥ್ ಮದ್ದಿನ ಛತ್ರಪ್ಪ ಮದ್ದಿನ, ರಾಮಣ್ಣ ಮದ್ದಿನ ಹಾಗೂ ಇನ್ಮಿತರರಿ ಬಿಜೆಪಿ ಪಕ್ಷ ತೊರೆದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಅದೇ ರೀತಿ ಭೋವಿ ಸಮಾಜದ ಶಿವು ಕಂದಗಲ್ ಅವರು ಅಪಾರ ಬೆಂಬಲಿಗರೊಂದಿಗೆ ಹಾಗೂ ಯಾದವ ಸಮಾಜದ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.