ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:– ಪಟ್ಟಣದ ಮುಸ್ಲಿಂ ಸಮಾಜದ ಹಿರಿಯರು ಹಾಗೂ ಶತಾಯುಷಿ ರಷೀದಾ ಬೇಗಂ ಖಾಜಿ (116) ಬುಧುವಾರ ಸಂಜೆ ನಿಧನರಾಗಿದ್ದು, ಮುಸ್ಲಿಂ ಸಮಾಜದವರು ಸೇರಿದಂತೆ ಪಟ್ಟಣದ ಸರ್ವ ಜನಾಂಗದವರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರು 4 ಗಂಡು ಮಕ್ಕಳು ಹಾಗೂ 3 ಜನ ಹೆಣ್ಣುಮಕ್ಕಳನ್ನು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದು ಮೃತರ ಅಂತ್ಯಕ್ರಿಯೆಯು ಗುರುವಾರ ಮಧ್ಯಾಹ್ನ ಖಬರಸ್ಥಾನ ದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.