ವರದಿ ಎನ್ ಶಾಮೀದ್ ತಾವರಗೇರಾ
ಗಂಗಾವತಿ:- ಅನಾರೋಗ್ಯ ದಿಂದ ಮೃತ ಪಟ್ಟ ಮಹಿಳೆಯೊಬ್ಬರ ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಂಡು ಮಾನವೀಯತೆ ಮೆರೆದ ಜನಾರ್ಧನ ರೆಡ್ಢಿ ನಡೆಗೆ ಹಲವಾರು ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಗಂಗಾವತಿ ತಾಲೂಕಿನ ವಿರುಪಾಪುರ ತಾಂಡದಲ್ಲಿ ಕಳೆದ ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದು , ಮಹಿಳೆಯ ಇಬ್ಬರು ಗಂಡು ಮಕ್ಕಳನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಹಾಗೂ ಪತ್ನಿ ಅರುಣಾ ಜನಾರ್ಧನ ರೆಡ್ಡಿ ಅವರು ಮಕ್ಕಳನ್ನು ದತ್ತು ತೆಗೆದುಕೊಳ್ಳುವುದರ ಮೂಲಕ ಶಿಕ್ಷಣ ಹಾಗೂ ಅವರನ್ನು ಸಂಪೂರ್ಣ ವಾಗಿ ಪೋಷಣೆ ಮಾಡುವ ಜವಾಬ್ದಾರಿಯನ್ನು ತೆಗೆದುಕೊಂಡು,
ತಾಂಡಾದ ಜನರ ಮುಂದೆಯೇ ಘೋಷಣೆ ಮಾಡಿರುವುದು ಅಲ್ಲಿ ನರೆದಿದ್ದ ಜನತೆಯ ಕಣ್ಣಂಚಲ್ಲಿ ನೀರು ತುಂಬಿತ್ತು, ಈ ಸಂದರ್ಭದಲ್ಲಿ ಮಕ್ಕಳು ಮುಕ ವಿಸ್ಮಿತರಾಗಿ, ಅವರ ನಿರ್ಧಾರಕ್ಕೆ ಧನ್ಯತಾಭಾವ ಸೂಚಿಸಿದಂತಿತ್ತು.
ಒಟ್ಟಾರೆ ಇಬ್ಬರು ಅನಾಥ ಮಕ್ಕಳಿಗೆ ಆಶ್ರಯ ನೀಡಿದ ಜನಾರ್ಧನ ರೆಡ್ಡಿ ದಂಪತಿಗಳಿಗೆ ತಾಂಡಾ ಜನರು ಅಭಿನಂದಿಸಿದ್ದಾರೆ.