Thursday , September 19 2024
Breaking News
Home / Breaking News / ತಾವರಗೇರಾ ಪಟ್ಟಣಕ್ಕೆ ವಿಜಯ ಸಂಕಲ್ಪ ಯಾತ್ರೆ ಆಗಮನ…!

ತಾವರಗೇರಾ ಪಟ್ಟಣಕ್ಕೆ ವಿಜಯ ಸಂಕಲ್ಪ ಯಾತ್ರೆ ಆಗಮನ…!

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ:- ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯು ಕೊಪ್ಪಳ ಜಿಲ್ಲೆಯಲ್ಲಿ ನಡೆಯಲಿದ್ದು ಪ್ರಥಮ ಹಂತವಾಗಿ ಮಾರ್ಚ 12 ರಂದು ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣಕ್ಕೆ ಆಗಮಿಸುವ ಮೂಲಕ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಸಂಕಲ್ಪ ಯಾತ್ರೆ ನಡೆಯಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ತಿಳಿಸಿದರು.

ಕುಷ್ಟಗಿಯಲ್ಲಿ ಗುರುವಾರ ಸಂಜೆ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿ ತಾವರಗೇರಾ ಪಟ್ಟಣಕ್ಕೆ ವಿಜಯ ಸಂಕಲ್ಪ ಯಾತ್ರೆಯು ದಿನಾಂಕ 12 ರಂದು ಬೆಳಿಗ್ಗೆ ಆಗಮಿಸಲಿದ್ದು , ಪಟ್ಟಣದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಬರಮಾಡಿಕೊಳ್ಳಲಿದ್ದೇವೆ, ವಿಜಯ ಸಂಕಲ್ಪ ಯಾತ್ರೆಯಲ್ಲಿ ಕೆಂದ್ರ ಸಚಿವರಾದ ಎ ನಾರಾಯಣಸ್ವಾಮಿ, ಭಗವಂತ ಖುಭಾ, ರಾಜ್ಯ ಸಚಿವರಾದ ಬಿ ಶ್ರೀ ರಾಮುಲು, ಆನಂದ್ ಸಿಂಗ್, ಹಾಲಪ್ಪ ಆಚಾರ , ಪ್ರಭು ಚೌಹಾಣ, ಮಾಜಿ ಸಚಿವ ಬಾಬುರಾವ ಚಿಂಚಣಸೂರ ಸೇರಿದಂತೆ ಇತರ ಬಿಜೆಪಿ ಮುಖಂಡರು ಉಪಸ್ಥಿತರಿರುತ್ತಾರೆ.

ನಂತರ ಯಾತ್ರೆಯು ನವಲಹಳ್ಳಿ, ಮನ್ನಾಪುರ ಮುಖಾಂತರ ಕುಷ್ಟಗಿ ಪಟ್ಟಣಕ್ಕೆ ಬರಲಿದೆ ಎಂದು ತಿಳಿಸಿದರು. ಅದೇ ರೀತಿ ಮಾರ್ಚ 14 ರಂದು ಹನುಮಸಾಗರದಲ್ಲಿ ಬಿಜೆಪಿ ಎಸ್ ಟಿ ಮೋರ್ಚ ಸಮಾವೇಶವೂ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಮಾಜಿ ಶಾಸಕ ಕೆ‌ ಶರಣಪ್ಪ, ಕುರಿ ಮತ್ತು ಉಣ್ಣಿಮೆ ನಿಗಮದ ಮಾಜಿ ಅಧ್ಯಕ್ಷ ಶರಣು ತಳ್ಳಿಕೇರಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ ಗೊಳಗಣ್ಣ, ಚಂದ್ರಕಾಂತ ವಡಗೇರಿ, ಈರಣ್ಣ ಸೊಬರದ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ತಾವರಗೇರಾ ವರದಿ:-  ಶುಕ್ರವಾರದಂದು ಸ್ಥಳೀಯ ಎಸ್ ಸಿ ಕಾಲೋನಿ ಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಪಕ್ಷದ ತತ್ವ ಸಿದ್ದಾಂತ ವನ್ನು ಮೆಚ್ಚಿ ಅನೇಕ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡಿದ್ದಾರೆ ಎಂದು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜೂಲಕುಂಟಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ , ಮುಖಂಡರಾದ ಶರಣು ತಳ್ಳಿಕೇರಿ, ಕೆ‌ ಮಹೇಶ, ಕಂದಕೂರಪ್ಪ ವಾಲ್ಮೀಕಿ, ಶಿವರಾಜ ಗೌಡ, ಪಪಂ ಸದಸ್ಯರಾದ ಬಸನಗೌಡ ಓಲಿ, ಮರಿಯಮ್ಮ ಬಿಸ್ತಿ, ಜಿಲ್ಲಾ ಮಹಿಳಾ ಮೋರ್ಚ ಉಪಾಧ್ಯಕ್ಷ ರಾದ ಶೃತಿ ದೇವರಮನಿ, ಮುಖಂಡರಾದ ಸಾಗರ ಭೇರಿ, ಅರುಣ್ ನಾಲತವಾಡ, ನಾಗರಾಜ ಮೇಲಿನಮನಿ, ಅರುಣ್ ಮರಿಯಪ್ಪ ಬಿಸ್ತಿ, ಗಾದಿಲಿಂಗ ಭಜಂತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!