ನಾಗರಾಜ ಎಸ್ ಮಡಿವಾಳರ
ಮುದಗಲ್ : ಇತ್ತೀಚಿಗೆ ಪುರಸಭೆ ಮಾಜಿ ಅಧ್ಯಕ್ಷೆ ಅಮೀನಾ ಬೇಗಂ ಸೈಯದ್ ಸಾಬ್ ಹಳೇಪೇಟೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಸೋಮವಾರ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ
ನಡೆಯಿತು.
ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಿರುವ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರಲ್ಲಿ ತೀವ್ರ ಪೈಪೋಟಿ ಸೃಷ್ಟಿ ಮಾಡಿತ್ತು ಕಾಂಗ್ರೆಸ್ ಮಹಿಳಾ ಸದಸ್ಯರಾದ 08 ನೇ ವಾರ್ಡ್ ಸದಸ್ಯೆ ರಬಿಯ ಬೇಗಂ ಹುಸೇನ್ ಅಲಿ ರನ್ನ ಅಧ್ಯಕ್ಷೆಯಾಗಿ 23ನೇ ವಾರ್ಡ್ ಸದಸ್ಯೆ ಜಯಶ್ರೀ ಶಂಕ್ರಪ್ಪ ಜೀಡಿಯನ್ನ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಪುರಸಭೆ ಗದ್ದುಗೆಗೆ ಏರಿಸಲು ಪುರಸಭೆ ಬಹು ಮತ ಹೊಂದಿದ ಕಾಂಗ್ರೆಸ್ ಸದಸ್ಯರು ಆಯ್ಕೆ ಮಾಡಿದರು.ಈ ಸಂದರ್ಭದಲ್ಲಿ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ಪುರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು ಇದ್ದರು.