Thursday , September 19 2024
Breaking News
Home / Breaking News / ತಾವರಗೇರಾ:- ಬೋನಿಗೆ ಬಿದ್ದ ಚಿರತೆ..!

ತಾವರಗೇರಾ:- ಬೋನಿಗೆ ಬಿದ್ದ ಚಿರತೆ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಕಳೆದ ಕೆಲ ದಿನಗಳಿಂದ ಕನ್ನಾಳ ಗುಡ್ಡದ ಹತ್ತಿರ ಚಿರತೆಯೊಂದು ಕಾಣಿಸಿಕೊಂಡಿದ್ದರಿಂದಾಗಿ ಭಯಬೀತರಾಗಿದ್ದ ಜನರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರಿಂದಾಗಿ, ಚಿರತೆ ಸೆರೆಹಿಡಿಯಲು ಬೋನ್ ಅನ್ನು ಅಳವಡಿಸಿದ್ದರು, ಶನಿವಾರ ರಾತ್ರಿ ಹೆಣ್ಣು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ.

ಸಾರ್ವಜನಿಕರ ಆರೋಪ:- ಕಳೆದ ಕೆಲ ದಿನಗಳಿಂದ ಚಿರತೆ ಹಾಗೂ ಕರಡಿಗಳು ಆಗಾಗ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದು ಸುತ್ತಲಿನ ತೋಟದ ಮಾಲೀಕರಲ್ಲಿ ಆತಂಕಗೊಂಡು ಭಯಭೀತಿಯಲ್ಲಿ ಕಾಲ ಕಳೆಯುತ್ತಿದ್ದು ಸೆರೆ ಹಿಡಿದ ಚಿರತೆ ಹಾಗೂ ಕರಡಿಗಳನ್ನು ಇಲ್ಲಿಯೇ ಸಮೀಪದಲ್ಲಿರುವ ಗುಡ್ಡಗಳಲ್ಲಿ ಬಿಟ್ಟು ಬರುತ್ತಿದ್ದಾರೆಂಬ ಅನುಮಾನ ವ್ಯಕ್ತಪಡಿಸಿದ್ದು ಈ ಕುರಿತಾಗಿ ವಲಯ ಅರಣ್ಯಧಿಕಾರಿಗಳನ್ನು ವಿಚಾರಿಸಲಾಗಿ ಈ ಬಗ್ಗೆ ನಾವು ಮಾಧ್ಯಮದ ಮುಂದೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ವಲಯ ಅರಣ್ಯಧಿಕಾರಿಗಳು ಹೇಳುತ್ತಿರುವುದು ಕೂಡ ಹಲವು ಅನುಮಾನ ಗಳಿಗೆ ಕಾರಣವಾಗಿದೆ ?

ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಈ ಬಗ್ಗೆ ಎಚ್ಚೆತ್ತುಕೊಂಡು, ಸೆರೆ ಹಿಡಿದ ಚಿರತೆ ಹಾಗೂ ಕರಡಿಗಳನ್ನು ದೂರದ ದಟ್ಟ ಅರಣ್ಯಕ್ಕೆ ಸಾಗಿಸಬೇಕೆಂದು ಇಲ್ಲಿಯ ಸಾರ್ವಜನಿಕರ ಆಗ್ರಹವಾಗಿದೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!