ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ಸ್ಫೂರ್ತಿ ಯುವಕ ಸಂಘ (ರಿ)ತಾವರಗೇರಾ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ತಾವರಗೇರಾ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಮೃತ ಭಾರತಿ ಕೃತಿ ಲೋಕಾರ್ಪಣೆ ಸಮಾರಂಭ ಸ್ಥಳೀಯ ಕಸಾಪ ಭವನದಲ್ಲಿ ನಡೆಯಿತು.
ದಿವ್ಯ ಸಾನಿಧ್ಯ ವನ್ನು ಶಿವರಾಜಶಾಸ್ತ್ರಿಗಳು ವಹಿಸಿದ್ದರು.
ಹಿರಿಯ ಸಾಹಿತಿ ಶೇಖರಗೌಡ ಸರನಾಡಗೌಡ್ರು ಕೃತಿ ಲೋಕಾರ್ಪಣೆ ಮಾಡಿದರು.
ಪ್ರಾಸ್ತಾವಿಕವಾಗಿ ಸೋಮಲಿಂಗಪ್ಪ ತುರವಿಹಾಳ ಮಾತನಾಡಿ, 75 ನೇ ಅಮೃತ ಮಹೋತ್ಸವದ ಸವಿ ನೆನಪಿಗಾಗಿ 75 ಕವಿಗಳಿಂದ ಕವನಗಳನ್ನು ಆಹ್ವಾನಿಸದಾಗ ನೂರಾರು ಕವಿತೆಗಳು ಬಂದಾಗ ಅವುಗಳಲ್ಲಿ 75 ಕವನಗಳನ್ನು ಆಯ್ಕೆ ಮಾಡಲಾಯಿತು. ಅದರಲ್ಲಿ ದೇಶಭಕ್ತಿ ಕವಿತೆಗಳನ್ನು ನಾನಾ ಆಯಾಮಗಳಿಂದ ತುಲನಮಾಡಿ ಆಯ್ಕೆ ಮಾಡಲಾಯಿತು. ನಾಡ,ನುಡಿಗೆ ಗೌರವ ಕೊಡಬೇಕು ಎಂಬ ಸಣ್ಣ ಪ್ರಯತ್ನ ಮಾಡಲಾಗಿದೆ.
ವೇದಿಕೆಯಲ್ಲಿ ಸ್ಫೂರ್ತಿ ಯುವಕ ಸಂಘದ ಅಧ್ಯಕ್ಷ ಶ್ಯಾಮ್ ಭಂಗಿ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸುವರ್ಣಮ್ಮ ಕುಂಬಾರ, ಕಸಾಪ ಹೋಬಳಿ ಘಟಕದ ಅಧ್ಯಕ್ಷ ರವಿಂದ್ರನಾಥ ಬಳಿಗೇರ, ಶರಣ ಸಾಹಿತ್ಯ ಪರಿಷತ್ತಿನ ಹೋಬಳಿಘಟಕದ ಅಧ್ಯಕ್ಷ ಬಸವರಾಜ ದೇವರಮನಿ, ಪತ್ರಕರ್ತ ಶರಣಬಸವ ನವಲಹಳ್ಳಿ, ತಾವರಗೇರಾ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಪವಿತ್ರಾ ಅಕ್ಕನವರು,
ಕಾರ್ಯಕ್ರಮವನ್ನು ಆರ್ ಜೆ ಅಂಬಿಗೇರ ಪ್ರಾರ್ಥಿಸಿದರು,
ಬಸವರಾಜ ಅಂಗಡಿ ಸ್ವಾಗತಿಸಿದರು.
ಉಪನ್ಯಾಸಕ ಸಂಗಪ್ಪ ಗುಡದೂರ ನಿರೂಪಿಸಿದರು.
ಈ ಸಂದರ್ಭದಲ್ಲಿ ನರಹರಿಯಪ್ಪ ದರೋಜಿ, ವಿಶ್ವನಾಥ ಸುಂಕನೂರು, ಪಪಂ ಸದಸ್ಯೆರಾದ ಬೇಬಿರೇಖಾ ಉಪ್ಪಳ, ಅಂಬುಜಾ ಹೂಗಾರ, ಮಂಜುನಾಥ ಜಿನ್ನಾಪೂರ, ಹಸನಸಾಬ ಮಕಂದಾರ್, ಸೋಮಣ್ಣ ಐಲಿ, ಸೋಮಲಿಂಗಪ್ಪತುರವಿಹಾಳ, ದೇವರಾಜ ಕಣ್ಣೂರು ಸೇರಿದಂತೆ ಇನ್ನಿತರರಿದ್ದರು.