Thursday , September 19 2024
Breaking News
Home / Breaking News / ಮಾಜಿ ಶಾಸಕರ ಭ್ರಷ್ಟಾಚಾರದಲ್ಲಿ ಹಾಲಿ ಶಾಸಕರ ಪಾಲೇಷ್ಟು : ಎಚ್ ಬಿ ಮುರಾರಿ ಆರೋಪ 

ಮಾಜಿ ಶಾಸಕರ ಭ್ರಷ್ಟಾಚಾರದಲ್ಲಿ ಹಾಲಿ ಶಾಸಕರ ಪಾಲೇಷ್ಟು : ಎಚ್ ಬಿ ಮುರಾರಿ ಆರೋಪ 

ನಾಗರಾಜ್ ಎಸ್ ಮಡಿವಾಳರ
ಮುದಗಲ್ : ಮಾಜಿ ಶಾಸಕರ ಭ್ರಷ್ಟಾಚಾರದಲ್ಲಿ ಹಾಲಿ ಶಾಸಕರ ಪಾಲೇಷ್ಟು ಎಂದು ರಾಜೀವ್ ಗಾಂಧಿ ರಾಜ್ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಹಯೋಜಕ ಎಚ್ ಬಿ ಮುರಾರಿ ಹೇಳಿದರು.
ಸಮೀಪದ ನಾಗಲಾಪುರ ಗ್ರಾಮದಲ್ಲಿ ಭಾರತ್ ಜೋಡೋ ಯಾತ್ರೆಯ  ಭಾಷಣದಲ್ಲಿ ಮಾತನಾಡಿದ ಅವರು ಲಿಂಗಸಗೂರು ಕ್ಷೇತ್ರ ರಾಜಕಾರಣಿಗಳ ಕಾರ್ಖಾನೆಯಾಗಿದೆ ತಾಲೂಕಿನ ಅಮ್ಮ ಬಸರಾಜೇಶ್ವರಿ ಗೆಜ್ಜೆಲ ಗಟ್ಟಿ, ಬಸವರಾಜ್ ಪಟೇಲ್ ಅನ್ವರಿ, ಕುಷ್ಟಗಿ ಶಾಸಕ ಅಮರೇಗೌಡರ ಹಾದಿಯಾಗಿ ಲಿಂಗಸಗೂರು ಕ್ಷೇತ್ರ ನಾಡಿಗೆ ಹಲವು ನಾಯಕರನ್ನ ನೀಡಿದೆ ಇಂತಹ ಕ್ಷೇತ್ರದಲ್ಲಿ ಸ್ಥಳೀಯರಿಗೆ ಸೇವವಕಾಶ ನೀಡದ ಕಾರಣ
2008ರಿಂದ ನಾವು ಎಂತಹ ಶಾಸಕರನ್ನ ಆಯ್ಕೆ ಮಾಡಿದ್ದೇವೆ ಎರೆಡು ಬಾರಿ ಸುರಪುರದಿಂದ ಬಂದವರಿಗೆ ಒಂದು ಬಾರಿ ಇಲಕಲ್ಲರಿಂದ ಬಂದವರಿಗೆ ಆಶೀರ್ವಾದ ನೀಡಿ ಶಾಸಕರನ್ನಾಗಿ ಮಾಡಿದ್ದೀರಿ ಆದರೆ 15ವರ್ಷದ ಕಾಲವಾದಿಯಲ್ಲಿ ಇವರಿಬ್ಬರಿಂದ ಪಡೆದ ಸೇವೆಯಾದರು ಏನು ಎಂಬುದು ಮತದಾರರು ನೋಡಬೇಕಿದೆ ಇವರ ಆತ್ಮ ಚರಿತ್ರೆ, ಇವರ ದರೋಡೆ ಕಾರ್ಯಗಳನ್ನ ನಾವು ನೆನಪಿಸಿಕೊಳ್ಳಬೇಕಿದೆ ಕ್ಷೇತ್ರದಲ್ಲಿ ನೂರಾರು ಕೋಟಿ ರೂಪಾಯಿ  ದರೋಡೆಯಾಗಿದೆ ನಮ್ಮ ಭಾಗದ ಆಶಾಕಿರಣವಾದ ನಾರಾಯಣಪುರ ಬಲದಂಡೆ ಕಾಲುವೆ ನಿರ್ಮಾಣಕ್ಕೆ ಅಂದು 400 ಕೋಟಿ ರೂಪಾಯಿ ಹಣ ಖರ್ಚು ಮಾಡಲಾಗಿದೆ ಆದರೆ ಇಂದು ಅದೇ ಕಾಲುವೆ ರಿಪೇರಿ ಮಾಡಲು ಖರ್ಚಾಗಿದ್ದು 1500ಕೋಟಿ ರೂಪಾಯಿಗಳನ್ನ ಖರ್ಚು ಮಾಡಲಾಗಿದೆ, ವಿತರಣೆ ಕಾಲುವೆ ನಿರ್ಮಾಣಕ್ಕಾಗಿ ಅಂದು 150ಕೋಟಿ ಖರ್ಚು ಮಾಡಲಾಗಿತ್ತು ಆದರೆ ಇಂದು ಅದರ ರಿಪೇರಿ ಹೆಸರಿನಲ್ಲಿ  1400 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಅನೇಕ ವರ್ಷಗಳ ಹೋರಾಟದ ಫಲ ನಂದವಾಡಗಿ ಏತ ನೀರಾವರಿ ಯೋಜನೆ ಜಾರಿಯಾಗಿತ್ತು ಆದರೆ ಇವತ್ತು ಈ ವಲಸಿಗ ಶಾಸಕರ ಕೈಯಲ್ಲಿ ಸಿಕ್ಕು ರೈತರ ಜಮೀನುಗಳಿಗೆ ಒಂದು ಹನಿ ನೀರು ಹರಿಯದೆ ಅದರಲ್ಲಿ ಭ್ರಷ್ಟಾಚಾರ ನಡೆದಿದೆ ಇಷ್ಟಾದರೂ ಕೂಡ ಪ್ರಸ್ತುತ ಶಾಸಕರ ಮೌನಕ್ಕೆ ಕಾರಣವೇನು ಭ್ರಷ್ಟಾಚಾರಗಳಲ್ಲಿ ಅವರ ಪಾಲೇಷ್ಟು ಎನ್ನುವುದರ ಬಗ್ಗೆ ಕ್ಷೇತ್ರದ ಜನ ಆಲೋಚನೆ ಮಾಡಿ ಮುಂದಿನ ತಾಲೂಕಿನ ಮನಗನಾಗಿ ಸತತ 40 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ ನಿಮ್ಮ ಆಶೀರ್ವಾದಕ್ಕಾಗಿ ತಾಲೂಕಿನಲ್ಲಿ  25ನೇ ದಿನದ ಪ್ರಯಾಣಿಸಿ 132ಹಳ್ಳಿ, 438 ಕಿಲೋ ಮೀಟರ್ ಗಳ ಪಾದಯಾತ್ರೆ ಮೂಲಕ ಪಡೆಯುತ್ತಿದ್ದೇನೆ ಎಂದರು. ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ಯ ಸಂಘಟನೆ ರಾಜ್ಯ ಸಂಚಾಲಕ ವಿಜಯ ಸಿಂಗ್,
ಮಾಜಿ ತಾ ಪಂಚಾಯತ್ ಉಪಾಧ್ಯಕ್ಷರು ಜೆ ಬಾಬು, ಗ್ಯಾನನಗೌಡ ನಾಗಲಾಪುರ್, ಬಸನಗೌಡ ಮಾ ಪಾಟೀಲ್ ಮರಳಿ, ರಾಮನಗೌಡ ಪೊ ಪಾಟೀಲ್, ದುರಗಪ್ಪ ಪೂಜಾರಿ ತುರಡಗಿ, ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮಣ ರಾಠೋಡ್ ಚತ್ತಾರ ತಾಂಡಾ, ಮಲ್ಲೇಶ್ ವ್ಯಾಕರನಾಳ, ನಾಗರಾಜ ತಿಪ್ಪಣ್ಣ ಲಿಂಗಸಗೂರು, ಪಂಪಪತಿ ಪರಂಗಿ ಇನ್ನಿತರರ ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!