ನಾಗರಾಜ್ ಎಸ್ ಮಡಿವಾಳರ
ಮುದಗಲ್ : ಕಳೆದ ಅಕ್ಟೋಬರ್ 10ರಂದು ಪಟ್ಟಣದ ಶ್ರೀ ರಾಮಲಿಂಗೇಶ್ವರ ಕಾಲೋನಿ ಹತ್ತಿರದ ಜೆಕೆ ಜೂವೇಲರಿಯ ಮಾಲೀಕ ಶ್ರವಣ ಜೈನ್ ತಂದೆ ಪದಮ್ ಜೈನ್ ರವರು ಅಂಗಡಿಯಿಂದ ಮನೆಗೆ ತೆರಳುವಾಗ ಕಾಲೋನಿಯ ಕಮಾನಿನ ಬಳಿ ಕಣ್ಣಿಗೆ ಕಾರದ ಪುಡಿ ಎರಚಿ 13ಲಕ್ಷ ಮೌಲ್ಯದ 300 ಗ್ರಾಂ ಬಂಗಾರ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುದಗಲ್ ಪೊಲೀಸರು ಮೂವರನ್ನ ಬಂಧಿಸಿ 12.50ಲಕ್ಷ ರೂಪಾಯಿ ಮೌಲ್ಯದ 256.50 ಗ್ರಾಂ ಬಂಗಾರವನ್ನ ಪತ್ತೆಮಾಡಿ ವಶಕ್ಕೆ ಪಡೆದಿದ್ದಾರೆ.
ಕಳ್ಳತನ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಪತ್ತೆ ಮಾಡುವ ಕುರಿತು
ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್.ಬಿ.ಐ ಪಿ ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಶಿವುಕುಮಾರ ಮತ್ತು ಡಿ.ಎಸ್.ಪಿ ಮಂಜುನಾಥ ರವರ ಮಾರ್ಗದರ್ಶನದಲ್ಲಿ ಮಸ್ಕಿ ಸಿಪಿಐ ವೃತ್ತ ಸಂಜೀವ ಎಸ್.ಬಳೆಗಾರ ರವರ ನೇತೃತ್ವದಲ್ಲಿ
ಮುದಗಲ್ ರಾಣೆಯ ಪಿಎಸ್ಐ ಪ್ರಕಾಶರಡ್ಡಿ ಡಂಬಳ ಹಾಗೂ ಸಿಬ್ಬಂದಿರವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ವೈಜ್ಞಾನಿಕ ವಿಧಾನಗಳ ಮೂಲಕ ತನಿಖೆ ನಡೆಸಿ
ದಾದಪೀರ ದದ್ದು ತಂದೆ ಮೌಲಸಾಬ ವಾಳಿ , ಗೋಕಲಸಾಬ ಗೌಸ್ ತಂದೆ ಶಾಮೀದ್ ಸಾಬ,ಸಾಬೀರಬೇಗ್ ತಂದೆ ಎಕ್ವಾಲಬೇಗ್ ಎಂಬುವ ಆರೋಪಿಗಳನ್ನ ಬಂಧಿಸಿ 256.065 ಗ್ರಾಂ ಅಂದಾಜು ಕಿಮ್ಮತ್ತು 12,50 ಲಕ್ಷ ರೂಪಾಯಿ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಮತ್ತು ಕಳ್ಳತನಕ್ಕೆ ಬಳಸಿದ್ದ ಸ್ಕೂಟಿ ವಶಕ್ಕೆ ಪಡೆದಿದ್ದಾರೆ ಎಂದು ಲಿಂಗಸಗೂರು ಡಿ ಎಸ್ ಪಿ ಮಂಜುನಾಥ ತಿಳಿಸಿದ್ದಾರೆ.