Thursday , September 19 2024
Breaking News
Home / Breaking News / ಸಹದೇವ ಯರಗೊಪ್ಪ ಇವರಿಗೆ ರಾಜ್ಯ ಮಟ್ಟದ ಗಜಲ್ ಕಾವ್ಯ ಪ್ರಶಸ್ತಿ..!

ಸಹದೇವ ಯರಗೊಪ್ಪ ಇವರಿಗೆ ರಾಜ್ಯ ಮಟ್ಟದ ಗಜಲ್ ಕಾವ್ಯ ಪ್ರಶಸ್ತಿ..!

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ:– ಜಿಲ್ಲೆಯ ಕೃಷಿ ಇಲಾಖೆ ಉಪ ನಿರ್ದೇಶಕರು ಹಾಗೂ ಗಜಲ್ ಕವಿ ಗಳಾದ ಸಹದೇವ ಯರಗೊಪ್ಪ ಇವರಿಗೆ ರಾಜ್ಯ ಮಟ್ಟದ ಗಜಲ್ ಕಾವ್ಯ ಪ್ರಶಸ್ತಿ ದೊರೆತಿದೆ.

ಇವರ ಗಜಲ್ ಸಾಹಿತ್ಯ ಸಾಧನೆಯನ್ನು ಗುರುತಿಸಿ ರಾಜ್ಯ ದಲಿತ ಸಾಹಿತ್ಯ ಪರಿಷತ್ತು ಸದರಿ ಪ್ರಶಸ್ತಿಯನ್ನು ಘೋಷಿಸಿದ್ದು ಇದೇ ಅಕ್ಟೋಬರ್ 30 ರಂದು ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬದ ಅಂಗವಾಗಿ ಗದಗ ಜಿಲ್ಲೆಯ ನರಗುಂದ ಪಟ್ಟಣದ ಭೈರವನಹಟ್ಟಿ ದೊರೆಸ್ವಾಮಿ ವಿರಕ್ತ ಮಠದ ಆವರಣದಲ್ಲಿ ನಡೆಯುವ ಅಖಿಲ ಭಾರತ ಗಜಲ್ ಸಮೇಳನದಲ್ಲಿ ಸಹದೇವ ಯರಗೊಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಡಾ. ಅರ್ಜುನ್ ಗೊಳಸಂಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಕಿರು ಪರಿಚಯ:– ಸಹದೇವ ಯರಗೊಪ್ಪ ಅವರು ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿ ಎಂಬ ಪುಟ್ಟ ಗ್ರಾಮದಲ್ಲಿ ಕೃಷಿಕರ ಕುಟುಂಬದವರಾದ ದ್ಯಾವಪ್ಪ ಬೀಮವ್ವ ದಂಪತಿಗಳ 5ನೇ ಮಗನಾಗಿ ಜನಿಸಿದ್ದು, ಧಾರವಾಡದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು 2007 ರಲ್ಲಿ ಕೃಷಿ ಇಲಾಖೆಗೆ ಸೇವೆ ಪ್ರಾರಂಭಿಸಿದರು ನಂತರ ಗಜಲ್ ಸಾಹಿತ್ಯದಲ್ಲಿ ಆಸಕ್ತಿ ವಹಿಸಿ ಸಾಚಿ ಗಜಲ್ ಮೊದಲ ಕೃತಿಯಿಂದಾಗಿ ರಾಜ್ಯದಾದ್ಯಂತ ಪರಿಚಿತ ಗೊಂಡರು. ಇಲಾಖೆಯಲ್ಲಿ ಕೂಡ ಉತ್ತಮ ಹೆಸರು ಪಡೆದಿದ್ದು ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!