ನಾಗರಾಜ್ ಎಸ್ ಮಡಿವಾಳರ
ಮುದಗಲ್: ಸ್ಥಳೀಯ ಎಪಿಎಂಸಿ ಅವರಣದಲ್ಲಿ ಪ್ರತಿ ಭಾನುವಾರ ನಡೆಯುತಿದ್ದ ಕುರಿ,ಮೇಕೆ ಮಾರಾಟಕ್ಕೆ ಯಾವುದೆ ನಿರ್ಬಂಧ ಇರುವದಿಲ್ಲ ಎಂದು ಎಪಿಎಂಸಿ ಅಧಿಕಾರಿಗಳು ಸ್ಪಷ್ಟ ಪಡೆಸಿದ್ದಾರೆ.
ಇತ್ತೀಚೆಗೆ ದನ,ಎಮ್ಮೆಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಜಾನುವಾರಗಳ ಸಂತೆಯನ್ನು ಬಂದ್ ಮಾಡಲಾಗಿತ್ತು. ಆದರೆ ಚರ್ಮಗಂಟು ರೋಗ ಕುರಿ,ಮೇಕೆಗಳಿಗೆ ಕಾಣಿಸಿಕೊಳ್ಳುವದಿಲ್ಲ. ಇದರಿಂದಾಗಿ ಕುರಿ,ಮೇಕೆ ಸಂತೆ ಹಾಗೂ ಮಾರಾಟಕ್ಕೆ ಯಾವುದೆ ನಿರ್ಬಂದ ಇರುವದಿಲ್ಲ ಎಂದು ಅಧಿಕಾರಿಗಳು ನೀಡಿದ ಆದೇಶದಲ್ಲಿ ಸ್ಪಷ್ಟಪಡೆಸಿದ್ದಾರೆ. ಕಳೆದ ಭಾನುವಾರ (ಅ.9)ರಂದು ಅಧಿಕಾರಿಗಳ ಗೊಂದಲದಿಂದಾಗಿ ಕುರಿ,ಮೇಕೆ ಮಾರಾಟ ರದ್ದು ಪಡೆಸಿದ್ದರಿಂದ ನೂರಾರು ಕುರಿಗಾರರು ಮುದಗಲ್-ತಾವರಗೇರ ರಾಜ್ಯ ಹೆದ್ದಾರಿಯಲ್ಲಿ ನಿಲ್ಲಿಸಿ ಕುರಿ,ಮೇಕೆ ಮಾರಾಟ ಮಾಡಿದ್ದರಿಂದ ಟ್ರಾಫೀಕ್ ಸಮಸ್ಯೆ ಉಂಟಾಗಿತ್ತು. ಇದರಿಂದ ಅಧಿಕಾರಿಗಳು ಎಚ್ಚೆತ್ತು ಮುದಗಲ್ ಎಪಿಎಂಸಿ ಆವರಣದಲ್ಲಿ ಕುರಿ,ಮೇಕೆ ಮಾರಾಟ ಮತ್ತು ಖರಿದಿ ಸಂತೆ ಮಾಡಲು ಯಾವುದೆ ನಿರ್ಬಂಧ ಇಲ್ಲ ಎಂದು ಮಾರುಕಟ್ಟೆ ನಿರ್ವಹಣೆ ಜವಬ್ದಾರಿ ವಹಿಸಿಕೊಂಡಿರುವ ಮುದಗಲ್ ಹೋಬಳಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಕ್ಕೆ ನೀಡಿದ ಪತ್ರದಲ್ಲಿ ತಿಳಿಸಿದ್ದಾರೆ.