ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ : ಕಳೆದ ಕೆಲ ದಿನಗಳಿಂದ ಸಂಗನಾಳ ವ್ಯಾಪ್ತಿಯಲ್ಲಿ ಕರಡಿಯೊಂದು ಪ್ರತ್ಯಕ್ಷ ಗೊಂಡು ರೈತರು ಹಾಗೂ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು . ಸೋಮವಾರ ತಡರಾತ್ರಿ ಕರಡಿಯನ್ನು ಸೆರೆ ಹಿಡಿಯುವ ಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ.
ಕರಡಿ ಪ್ರತ್ಯಕ್ಷದಿಂದಾಗಿ ಸಾರ್ವಜನಿಕರು ಅರಣ್ಯಿಲಾಖೆಯ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯವರು ಕರಡಿ ಸೆರೆ ಹಿಡಿಯಲು ಬೋನ್ ಅನ್ನು ಅಳವಡಿಸಿ ಕರಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಧರ್ಬದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಚೈತ್ರ ಮೆಣಸಿನಕಾಯಿ, ಉಪ ವಲಯ ಅರಣ್ಯಾಧಿಕಾರಿಗಳಾದ ಹನುಮಂತಪ್ಪ, ಮಹ್ಮದ್ ರಿಯಾಜ್ , ಶಿವಶಂಕರ ರೇವಣಕಿ, ಲಾಲಸಾಬ, ಅರಣ್ಯ ರಕ್ಷಕರಾದ ಮಹಾಂತೇಶ ಎಂ ರಡ್ಡೇರ,
ಅರಣ್ಯ ವೀಕ್ಷಕರಾದ ಗಂಗಾಧರ, ಲಕ್ಷ್ಮಣ, ಯಮನಪ್ಪ ಹಾಗೂ ಛತ್ರಪ್ಪ ಇದ್ದರು