ನಾಗರಾಜ್ ಎಸ್ ಮಡಿವಾಳರ
ಮುದಗಲ್ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಸಂಸ್ಥೆಯಿಂದ ಪಟ್ಟಣದ ಶ್ರೀ ನೀಲಕಂಟೇಶ್ವರ ದೇವಸ್ಥಾನ ನಡೆದ ಮದ್ಯ ವರ್ಜನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶ್ರೀಗುರು ಮಹಾಂತ ಮಹಾ ಸ್ವಾಮಿಗಳು ಮಾತನಾಡಿ ದುಶ್ಚಟಕ್ಕೆ ಬಲಿಯಾಗಿ ಸಾವಿರಾರು ಕುಟುಂಬಗಳ ಪರಿಸ್ಥಿತಿ ಗಂಭೀರವಾಗಿದೆ ಶ್ರೀ ಮಠದ ಪೂಜ್ಯರು ಮಹಾಂತ ಜೋಳಿಗೆಯ ಮೂಲಕ ಜನರ ದುಶ್ಚಟಗಳನ್ನ ಭಿಕ್ಷೆ ಬೇಡಿ ಸಮಾಜ ಸುಧಾರಣೆ ಮಾಡುವ ಮಹತ್ವದ ಕಾರ್ಯ ಮಠದಿಂದ ನಡೆಯುತ್ತದೆ.
ಅದೇರೀತಿಯಲ್ಲಿ ಶಿಬಿರದ ಮೂಲಕ ಧರ್ಮಸ್ಥಳ ಧರ್ಮಧಿಕಾರಿಗಳು ಮಾಡುತ್ತಿರುವ ಕಾರ್ಯವೂ ಶ್ಲಾಘನೀಯ ಇಲ್ಲಿಗೆ ಬಂದಂತಹ ಶಿಬಿರಾರ್ಥಿಗಳು ಸಮಾಧಾನದಿಂದ ಇದ್ದು ಮದ್ಯ ಮುಕ್ತ ಸಮಾಜಕ್ಕೆ ನೀವೆಲ್ಲ ಸಾಕ್ಷಿಯಾಗಿ ಎಂದರು ನಂತರದ ಮಾತನಾಡಿದ ಡಾ. ಬಸಲಿಂಗಪ್ಪ ಶ್ರೀಗಳು ದೇಹವೆ ಒಂದು ದೇಗುಲ ವಿದ್ದಂತೆ ಅದನ್ನು ಕೊಳಚೆ ತುಂಬುವ ಮೂಲಕ ಗಲೀಜು ಮಾಡುವುದು ಬೇಡ ದೇಹದ ಪವಿತ್ರತೆ ಕಾಪಾಡಿ ದುಶ್ಚಟ ಗಳನ್ನ ಇಲ್ಲಿಯೇ ಬಿಟ್ಟು ನಿಮ್ಮ ಮತ್ತು ಕುಟುಂಬಗಳ ಸುಖಬಾಳ್ವೆ ನಡೆಸಿ ಎಂದು ಆಶೀರ್ವಾಚನ ನೀಡಿದರು ನಂತರದ ಮಾತನಾಡಿದ ಶಿಬಿರ ಸಮಿತಿ ಅಧ್ಯಕ್ಷ ಮಹಾಂತೇಶ ಪಾಟೀಲ್ 1970ರಲ್ಲೇ ಇಳಕಲ್ಲಿನ ಶ್ರೀ ಮಹಾಂತಪ್ಪ ನವರು ಮಹಾಂತ ಜೋಳಿಗೆ ಮೂಲಕ ಅದ್ಬುತ ಕಲ್ಪನೆಯ ಸ್ವಸ್ಥ ಸಮಾಜವನ್ನ ನಮ್ಮ ಮುಂದೆ ಇಟ್ಟಿದ್ದಾರೆ ಅವರ ಪ್ರತಿರೂಪವಾದ ಈಗಿನ ಶ್ರೀಗಳು ಕೂಡ ಸಮಾಜವನ್ನ ಅದೇ ಮಾರ್ಗದಲ್ಲಿ ಮೊನ್ನೆಡುಸುತ್ತಿದ್ದಾರೆ ಧರ್ಮಸ್ಥಳ ಶ್ರೀ ಕ್ಷೇತ್ರದ ಕಾರ್ಯಕ್ಕೆ ನಾವು ಎಂದಿಗೂ ಸಹಕಾರಿಯಾಗಿರುತ್ತೇವೆ ಎಂದರು.ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಭಿರುದ್ಧಿ ಸಂಸ್ಥೆ ನಿರ್ದೇಶಕ ಸಂತೋಷ ಕುಮಾರ, ಜನಜಾಗೃತಿ ವೇದಿಕೆ ಅಧ್ಯಕ್ಷೆ ಶಶಿಕಲಾ ಭೋವಿ,ಉಪಾಧ್ಯಕ್ಷ ರಫೀಕ್, ವೈದ್ಯಧಿಕಾರಿ ಡಾ. ಅನಂತ್ ಕುಮಾರ,ಸಮಿತಿ ಗೌರವಾಧ್ಯಕ್ಷ ಗುರುಬಸಪ್ಪ ಸಜ್ಜನ್ ಮಾತನಾಡಿದರು. ಈ ಸಂದರ್ಭ ಜಮರ್ ಅಹ್ಮದ್ ಖಾಜಿ,ಎಎಸ್ಐ ವೆಂಕಟಪ್ಪ ನಾಯಕ್, ಸಣ್ಣ ಸಿದ್ದಯ್ಯ ಸ್ವಾಮಿ, ದೊಡ್ಡ ಸಿದ್ದಯ್ಯ ಸ್ವಾಮಿ, ಮಲ್ಲಪ್ಪ ಮಟೂರು,ನ್ಯಾಮತ್ ಖಾದ್ರಿ ಯೋಜನಾಧಿಕಾರಿ ಮಹೇಶ್ ಎಬಿ, ಮೇಲ್ವಿಚಾರಕಿ ರಾಧಾ ಜಿ, ಶರಣಪ್ಪ ಸೇರಿದಂತೆ ಇನ್ನಿತರರು ಇದ್ದರು.