ನಾಗರಾಜ್ ಎಸ್ ಮಡಿವಾಳರ
ಮುದಗಲ್ : ರಾಯಚೂರು ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ (Lumpy skin disease) ಹರಡುತ್ತಿರುವ ಕಾರಣ ರೋಗದ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ರಾಯಚೂರು ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ ಕಾಯ್ದೆ -1973 ರ ಕಲಂ 144 ರ ಮೇರೆಗೆ ಜಾನುವಾರು ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆಯನ್ನು ನಿಷೇಧಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಮುದಗಲ್ ಪಟ್ಟಣದಲ್ಲಿ ನಡೆಯುವ ರವಿವಾರದ ಸಂತೆ ಬಂದ್ ಆಗಲಿದೆ.
ಜಿಲ್ಲೆಯಾದ್ಯಂತ ಜಾನುವಾರು ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆಯನ್ನು ಮಾಡುವುದನ್ನು ದಿನಾಂಕ 28-09-2022 ರಿಂದ 26.10.2022 ರ ವರೆಗೆ ಜಾನುವಾರು ಸಂತೆ ,ಮತ್ತು ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆಯನ್ನು ಮಾಡುವುದನ್ನು ನಿಷೇದಿಸಲಾಗಿದ್ದು ಲಿಂಗಸಗೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುದಗಲ್ ಉಪಮಾರುಕಟ್ಟೆ ಆವರಣಲ್ಲಿ ಪ್ರತಿ ಭಾನುವಾರ ಜಾನುವಾರು ಸಂತೆ ಬಂದ್ ಮಾಡಲಾಗುವುದು ಎಂದು ಸ್ಥಳೀಯ ಠಾಣೆಯ ಪಿಎಸ್ಐ ಪ್ರಕಾಶ್ ರೆಡ್ಡಿ ಡಂಬಳ ತಿಳಿಸಿದ್ದಾರೆ.