ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸೆಪ್ಟೆಂಬರ್ 14 ರಂದು ನೀಡಿದ್ದ ಬಂದ್ ಕರೆ ಹಿಂಪಡೆಯಲಾಗಿದೆ.
ಪಟ್ಟಣದ ಕೆಲ ಖಾಸಗಿ ಶಾಲಾ ಕಾಲೇಜುಗಳು ಅಗಸ್ಟ್ 15 ರಂದು ಅಮೃತ ಮಹೋತ್ಸವ ಆಚರಣೆ ವೇಳೆ
ಡಾ. ಬಿ ಆರ್ ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ್ದ ಹಿನ್ನೆಲೆಯಲ್ಲಿ ಅ.16ರಂದು ಬೃಹತ್ ಪ್ರತಿಭಟನೆ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಆಯುಕ್ತರ ಪರವಾಗಿ ಆಗಮಿಸಿದ್ದ ಸುಜಾತ ಪಾಟೀಲ್ ರವರಿಗೆ ಶಾಲಾ ಆಡಳಿತ ಮಂಡಳಿಯವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ 20ದಿನಗಳ ಗಡುವು ನೀಡಲಾಗಿತ್ತು.ಶಿಕ್ಷಣ ಇಲಾಖೆ ಸ್ಪಂದಿಸದ ಹಿನ್ನಲೆಯಲ್ಲಿ ಸಂಘರ್ಷ ಸಮಿತಿ ಸೆ.14ರಂದು ಮುದಗಲ್ ಬಂದ್ ಕರೆ ನೀಡಿತ್ತು. ಕೂಡಲೇ ಎಚ್ಛೆತ್ತ ಶಾಲಾ ಕಾಲೇಜುಗಳ ಪ್ರಮುಖರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಬಹಿರಂಗ ಕ್ಷಮೆಯಾಚನೆ ಮಾಡಿ ಬಂದ್ ಕರೆ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿತ್ತು. ಈ ಕುರಿತಂತೆ ದಲಿತ ಸಂಘರ್ಷ ಸಮಿತಿ ಪತ್ರಿಕಾ ಪ್ರಕಟಣೆ ನೀಡಿ ಶಿಕ್ಷಣಇಲಾಖೆ ಮುಂದೆಂದೂ ಇಂತಹ ತಪ್ಪುಗಳು ಆಗದಂತೆ ನೋಡಿಕ್ಕೊಳ್ಳಲಿ ಒಂದು ವೇಳೆ ಇದೆ ಘಟನೆ ಮಾರುಕಳಿಸಿದರೆ ಅದಕ್ಕೆ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿ ಮುದಗಲ್ ಬಂದ್ ಕರೆ ಹಿಂದಕ್ಕೆ ಪಡೆದಿದೆ ಎಂದು ದಲಿತ ಸಂಘರ್ಷ ಸಮಿತಿ ತಿಳಿಸದೆ.