Friday , November 22 2024
Breaking News
Home / Breaking News / ಸಿದ್ದಿ ವಿನಾಯಕನಿಗೆ ಸಾರಥಿಯಾದ ನೈಮತ್ ಖಾದ್ರಿ..

ಸಿದ್ದಿ ವಿನಾಯಕನಿಗೆ ಸಾರಥಿಯಾದ ನೈಮತ್ ಖಾದ್ರಿ..

ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ರಾಷ್ಟ್ರದಲ್ಲಿ ಹಿಂದು ಮುಸ್ಲಿಂ ಭಾವೈಕ್ಯ ಸಂಕೇತವಾಗಿ ಹಲವು ಹಬ್ಬಗಳ ಆಚರಣೆ ನಡೆಯುತ್ತವೆ. ಆ ಪೈಕಿ ಎರೆಡು ಸುತ್ತಿನ  ಕೋಟೆ ನಗರಿ ಮುದಗಲ್ಲ ಪಟ್ಟಣದ ಹೃದಯದ ಭಾಗವಾದ ಪುರಸಭೆ ರಂಗಮಂದಿರ ಆವರಣದಲ್ಲಿ ಸರ್ವ ಧರ್ಮದವರಿಂದ ಆಚರಣೆ ಮಾಡುವ ಗಣೇಶೋತ್ಸವ ವೈಶಿಷ್ಟ್ಯಪೂರ್ಣವಾಗಿ,ವಿವಿಧ ಧರ್ಮಗಳ ಬೆಸುಗೆಯ ಕೊಂಡಿಯಾಗಿದ್ದು ಪಟ್ಟಣದ ಪ್ರತಿಯೊಂದು ಜನಾಂಗ, ತಮ್ಮದೇ ಆದ ನಂಬಿಕೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಆಚರಣೆಯಲ್ಲಿ ಮಿಲನವಾಗಿ  ಧರ್ಮ ಮತ್ತು ಜಾತಿಯನ್ನು ಮೀರಿ ಗಣೇಶ ಚತುರ್ಥಿಯನ್ನ ಸಂಭ್ರಮಿಸುತ್ತಾರೆ,ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ವ ಧರ್ಮದವರಿಂದ  ದೇಣಿಗೆ ಸಂಗ್ರಹಣೆ ಮಾಡಿ  ಚತುರ್ಥಿಯಂದು ಜಾತಿ, ಧರ್ಮ ಎನ್ನದೆ ಸರ್ವ ಜನಾಂಗದವರು ಸೇರಿ ಗಣೇಶ ಮೂರ್ತಿಯನ್ನ  ಮೆರವಣಿಗೆ ಮೂಲಕ ರಂಗ ಮಂದಿರದ ಆವರಣದಲ್ಲಿ  ಸಿದ್ದ ಪಡಿಸಿದ ಮಂಟಪದಲ್ಲಿ  ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿ,ಮೂರು ದಿನಗಳ ನಂತರ ಅಂದರೆ ಕಳೆದ ಶುಕ್ರವಾರ ಮೂರ್ತಿ ವಿಸರ್ಜನೆಗೆ  ಸರ್ವ ಧರ್ಮದ ಮುಖಂಡರ ನೇತೃತ್ವದಲ್ಲಿ ಗಣೇಶ ಮೂರ್ತಿಯ ವಿವಿಧ ವಸ್ತುಗಳ  ಹರಾಜು ಪ್ರಕ್ರಿಯೆ ನಡೆಸಿ ನಂತರ  ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು, ವಿಶೇಷವಾಗಿ ಮುಸ್ಲಿಂ ಮುಖಂಡ ನೈಮತ್ ಖಾದ್ರಿ ಗಣೇಶ ಮೂರ್ತಿ ಹೊತ್ತ ವಾಹನದಚಾಲಕನ  ಸಿಟ್ ನಲ್ಲಿ ಕೂತು ಗಣೇಶನ ಸಾರಥಿಯಾಗಿ ಸೇವೆ ಸಲ್ಲಿಸಿದರು. ಮೆರವಣಿಗೆ ಉದ್ದಕ್ಕೂ ಪಟಾಕಿ ಸಿಡಿಸುತ್ತ, ಹಾಡು, ಕುಣಿತಗಳ ಮೂಲಕ ಪಟ್ಟಣದ ಹಬ್ಬದ ವಾತಾವರಣಕ್ಕೆ ರಂಗು ತಂದಿದ್ದು ಮುದಗಲ್ ಪಟ್ಟಣ ಭಾವೈಕ್ಯತೆಯಗೆ ಪ್ರಸಿದ್ಧವಾಗಿದ್ದು ಇಲ್ಲಿ ಸರ್ವ ಧರ್ಮದವರು ಸಮಾನವಾಗಿ ಎಲ್ಲ ಹಬ್ಬಗಳಲ್ಲೂ ಭಾಗವಹಿಸಿ ನಾಡಿಗೆ ಉತ್ತಮ ಸಾಮರಸ್ಯದಿಂದ  ಬದುಕಲು ಮಾದರಿಯಾಗಿದ್ದಾರೆ.

About Nagaraj M

Check Also

ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …

error: Content is protected !!