ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: 82 ಸಾವಿರ ರೂ ಬೆಲೆ ಬಾಳುವ ಬಂಗಾರದ ಸಾಮಾನುಗಳನ್ನು ಕದ್ದ ಕಳ್ಳನನ್ನು ಪ್ರಕರಣ ದಾಖಲಾದ 6 ಗಂಟೆಯೊಳಗಾಗಿ ಇಲ್ಲಿಯ ಪೊಲೀಸರು ಕಳ್ಳ ನನ್ನು ಬಂಧಿಸಿ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡ ಘಟನೆ ಗುರುವಾರದಂದು ನಡೆದಿದೆ.
ಇಲ್ಲಿಗೆ ಸಮೀಪದ ಹೊಮ್ಮಿನಾಳ ಗ್ರಾಮದ ಮೌಲಾಬಿ ಪಿಂಜಾರ ಎಂಬ ಮಹಿಳೆಗೆ ಸೇರಿದ 22 ಗ್ರಾಂ ತೂಕದ ಬೆಲೆ ಬಾಳುವ ಬಂಗಾಳ ಕಳ್ಳತನವಾಗಿದೆ ಎಂದು ಸ್ಥಳೀಯ ಠಾಣೆಗೆ ನೀಡಿದ ದೂರಿನ ಅನ್ವಯ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನ ಹಾಗೂ ಉಪಾಧೀಕ್ಷಕರ ಸಾರಥ್ಯದಲ್ಲಿ ಕುಷ್ಟಗಿ ಸಿಪಿಐ ಎನ್ ಆರ್ ನಿಂಗಪ್ಪ ನೇತೃತ್ವದಲ್ಲಿ ಸ್ಥಳೀಯ ಠಾಣಾಧಿಕಾರಿ ವೈಶಾಲಿ ಝಳಕಿ ಹಾಗೂ ಸಿಬ್ಬಂದಿ ವರ್ಗದವರಾದ ಮಲ್ಲಪ್ಪ ಎಎಸ್ಐ, ಶಿವಪುತ್ರಪ್ಪ ಎಎಸ್ಐ ಸಿಬ್ಬಂದಿಗಳಾದ ಬಸವರಾಜ, ಯಮನಪ್ಪ, ವೀರೇಶ, ಗುಂಡಪ್ಪ, ಆನಂದ, ಕರಿಯಪ್ಪ, ಮಹಾಂತೇಶ ಸೇರಿ ಆರೋಪಿತನಾದ ಕಂದಕೂರ ಗ್ರಾಮದ ಶಾಮೀದ ಸಾಬ ತಾಳಕೇರಿ ಇವನನ್ನು ಪತ್ತೆ ಮಾಡಿ ಲಿಂಗದಹಳ್ಳಿ ಗ್ರಾಮದಲ್ಲಿ ವಶಕ್ಕೆ ಪಡೆದು ಕಳ್ಳತನ ವಾಗಿದ್ದ 22 ಗ್ರಾಂ ಬಂಗಾರವನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.