ವರದಿ ಎನ್ ಶಾಮೀದ್ ತಾವರಗೇರಾ
ಕೊಪ್ಪಳ: ರೈತರು ಬೆಳೆದ ಹತ್ತಿ ಖರೀದಿಸಲು ಬಂದ ವ್ಯಾಪಾರಿಗಳ ಗುಂಪೊಂದು ತೂಕದಲ್ಲಿ ಮಹಾ ಮೋಸ ಮಾಡುತ್ತಿರುವ ಪ್ರಕರಣ ಜಿಲ್ಲೆಯಾದ್ಯಂತ ಕಂಡು ಬಂದಿದೆ.
ಚಪ್ಪಲಿಗಳಲ್ಲಿ ರಿಮೋಟ್ ಇಟ್ಟುಕೊಂಡು ರೈತರ ಹತ್ತಿ ಖರೀದಿಸಲು ಹೋದಾಗ ರೈತರಿಗೆ ಎಪಿಎಮ್ ಸಿ ಮಾರುಕಟ್ಟೆಯಲ್ಲಿ ಸಿಗುವ ಬೆಲೆಗಿಂತ 500 ರೂ ಗಳು ಹೆಚ್ಚಿಗೆ ನೀಡುತ್ತೆವೆ ಎಂದು ಹೇಳಿ ರಿಮೋಟ್ ಮೂಲಕ ತೂಕದಲ್ಲಿ ಮಹಾ ವಂಚನೆ ನಡೆಸಿರುವುದು ಬುಧುವಾರದಂದು ರೈತರ ಕಣ್ಣಿಗೆ ಬಿದ್ದು ಅವರನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
ಆದ್ದರಿಂದ ಜಿಲ್ಲೆಯ ರೈತರು ಇದರಿಂದ ಎಚ್ಚೆತ್ತುಕೊಂಡು ತಾವು ಬೆಳೆದ ಬೆಳೆಗೆ ಮೋಸಕ್ಕೆ ಒಳಗಾಗದೆ ಸೂಕ್ತ ಮಾರುಕಟ್ಟೆಯಲ್ಲಿ ತಮ್ಮ ಹತ್ತಿಯನ್ನು ಮಾರಾಟ ಮಾಡಬೇಕೆಂದು ಪ್ರಗತಿಪರ ರೈತರು, ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಆರೋಪಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂಬುದು ಉದಯ ವಾಹಿನಿಯ ಆಶಯವಾಗಿದೆ.