ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ಬಿಜೆಪಿ ಯವರಿಗೆ ಧೈರ್ಯವಿದ್ದರೇ ಆರ್ ಎಸ್ ಎಸ್ ಕಛೇರಿ ಮೇಲೆ ಕೇಸರಿ ಧ್ವಜದ ಬದಲಾಗಿ ರಾಷ್ಟ್ರೀಯ ಧ್ವಜ ಹಾರಿಸಲಿ ಎಂದು ಮಾಜಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶಿವರಾಜ ತಂಗಡಗಿಯವರು ಬಿಜೆಪಿ ಗೆ ಸವಾಲು ಎಸೆದರು.
ಅವರು ಶುಕ್ರವಾರದಂದು ಪಟ್ಟಣದ ಪಂಚಾಯತ ಕಾರ್ಯಾಲಯದ ಮುಂದೆ ಕಾಂಗ್ರೆಸ್ ನಡೆ ಸ್ವಾತಂತ್ರ್ಯ ದ ಕಡೆ, ಜಾಗೃತಿ ಜಾಥಾ ಪಾದಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಅಪಾರ ಕೊಡುಗೆ ಕೊಟ್ಟ ಕಾಂಗ್ರೆಸ್ ಪಕ್ಷವನ್ನು ಮರೆತಿರುವ ಇಂದಿನ ಯುವ ಜನತೆ ಸುಳ್ಳು ಭರವಸೆಗಳನ್ನು ನೀಡುತ್ತಿರುವ ಬಿಜೆಪಿಯನ್ನು ಬೆಂಬಲಿಸುತ್ತಿರುವುದು ವಿಷಾದನಿಯ.
ಇ.ಡಿ ಕೇಸ್:– ಬಿಜೆಪಿ ಯವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಅವರ ವಿರುದ್ಧ ಧ್ವನಿಯತ್ತಿದವರ ಮೇಲೆ ಇ.ಡಿ ಕೇಸ್ ದಾಖಲಿಸುತ್ತಿರುವುದು ನಾಚಿಗೇಡಿತನದ ವಿಷಯವಾಗಿದ್ದು ಇಂತಹ ವಿಷಯಗಳನ್ನು ಮಾಧ್ಯಮ ದವರು ಕೂಡ ಬೆಳಕಿಗೆ ತರದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಎಮ್ ಎಲ್ ಸಿ ಶರಣೇಗೌಡ ಬಯ್ಯಾಪುರ, ಮಾಜಿ ಶಾಸಕ ಹಸನಸಾಬ ದೋಟಿಹಾಳ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಲತಿ ನಾಯಕ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.