ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಎನ್ನುವಂತೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾಂಗ್ರೆಸ್ ನಡೆ ಸ್ವಾತಂತ್ರ್ಯದ ಕಡೆಗೆ ಎನ್ನುವ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೆವೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.
ಅವರು ಶುಕ್ರುವಾರದಂದು ಗಂಗನಾಳ ಪಂಚಪಕ್ಷಿ ಮಾರುತೇಶ್ವರ ದೇವಸ್ಥಾನದಿಂದ ತಾವರಗೇರಾ ವರೆಗೆ ಪಾದಯಾತ್ರೆ ಹಮ್ಮಿಕ್ಕೊಂಡ ಸಂದರ್ಭದಲ್ಲಿ ಮಾತನಾಡಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ ಸ್ವಾತಂತ್ರ್ಯೊಂತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸುವ ಮೂಲಕ ರಾಷ್ಟ್ರ ಪ್ರೇಮ ಮೆರೆಯೊಣ ಎಂದು ತಿಳಿಸಿದರು.
ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿವಿಧ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
,ಈ ಸಂದರ್ಭದಲ್ಲಿ ಎಮ್ ಎಲ್ ಸಿ ಶರಣೇಗೌಡ ಬಯ್ಯಾಪೂರ, ಮಾಜಿ ಶಾಸಕ ಹಸನಸಾಬ ದೋಟಿಹಾಳ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಮಾಲತಿ ನಾಯಕ, ಮುಖಂಡರಾದ ದೇವೆಂದ್ರಪ್ಪ ಬಳೂಟಗಿ, ಶೇಖರಗೌಡ ಗುಮಗೇರಿ , ಶಿವಶಂಕರಗೌಡ, ಬಸನಗೌಡ ಮಾಲಿ ಪಾಟೀಲ್, ನಾರಾಯಣ ಗೌಡ ಮೆದಿಕೇರಿ, ಡಾ. ಶಾಮೀದ್ ದೋಟಿಹಾಳ, ದುರುಗೇಶ ನಾರಿನಾಳ, ರುದ್ರಗೌಡ ಪಾಟೀಲ್, ವೀರಭದ್ರ ಗೌಡ ರಾಂಪುರ, ಲಿಂಗರಾಜ ಹಂಚಿನಾಳ, ಬೇಬಿ ರೇಖಾ ಉಪ್ಪಳ, ಶಶಿಕಲಾ ಬಿಳೇಗುಡ್ಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಈದೇ ಸಂದರ್ಭದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಹಲವು ಕಾರ್ಯಕರ್ತರು ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.