ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ನಡೆದ ಮಾರಾಮಾರಿ ಯಲ್ಲಿ ಇಬ್ಬರು ಸಾವನ್ನಪ್ಪಿ, ಇನ್ನೊಬ್ಬ ಯುವಕ ಗಂಭೀರ ಗಾಯವಾದ ಘಟನೆ ಸಮೀಪದ ಹುಲಿಹೈದರ ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿಗಳನ್ನು ಯಂಕಪ್ಪ ತಳವಾರ (57), ಪಾಷಾವಲಿ (26), ಹಾಗೂ ಗಂಭೀರವಾಗಿ ಗಾಯಗೊಂಡ ಧರ್ಮಣ್ಣ ಹರಿಜನ (22) ಎಂದು ಗುರುತಿಸಲಾಗಿದೆ.
ಹುಲಿಹೈದರ ಗ್ರಾಮದಲ್ಲಿ ಈ ಹಿಂದೆ ಮುಸ್ಲಿಂ ಹಾಗೂ ವಾಲ್ಮೀಕಿ ಸಮುದಾಯದವರ ಮಧ್ಯೆ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ವೈಮನಸ್ಸಿದ್ದು, ಜೊತೆಗೆ ಹಳೆಯ ಪ್ರೇಮ ಪ್ರಕರಣ ಕೂಡ ಈ ಘಟನೆಗೆ ಕಾರಣವಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ,
ಹುಲಿಹೈದರ ಗ್ರಾಮದಲ್ಲಿ ಈಗ ಪ್ರಕ್ಷುಬ್ದ ವಾತಾವರಣ ನಿರ್ಮಾಣಗೊಂಡಿದ್ದು, ಘಟನಾ ಸ್ಥಳಕ್ಕೆ ಡಿವಾಯಎಸ್ ಪಿ ಆರ್ ಎಸ್ ಉಜ್ಜನಕೊಪ್ಪ ಸೇರಿದಂತೆ ಜಿಲ್ಲೆಯ ಪೊಲೀಸ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ಬಿಡುಬಿಟ್ಟಿದ್ದು, ಹುಲಿಹೈದರ ಹಾಗೂ ಸುತ್ತಲಿನ 2 ಕಿಮೀ ವ್ಯಾಪ್ತಿಯಲ್ಲಿ 144 ಕಲಂ ನನ್ವಯ ನಿಷೇದಾಜ್ಞೆ ಜಾರಿಗೊಳಿಸಿ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸಾವೀಗಿಡಾದ ಎರಡು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.