ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದಲ್ಲಿ ನಡೆಯಲಿರುವ ಐತಿಹಾಸಿಕ ಮೊಹರಂ ಹಬ್ಬದ ನಿಮಿತ್ಯ ಲಕ್ಷಾಂತರ ಜನ ಸೇರುವ ನಿಟ್ಟಿನಲ್ಲಿ ಕಿಲ್ಲಾ ಒಳಗೆ ನಾಲ್ಕು ದಿನಗಳಕಾಲ ವಾಹನ ಸಂಚಾರ ನಿಷೇದಗೊಳಿಸಿದೆ ಎಂದು ಮುದಗಲ್ ಠಾಣೆಯ ಪಿಎಸ್ಐ ಪ್ರಕಾಶ್ ಡಂಬಳ ತಿಳಿಸಿದರು.
ಶನಿವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು
ಪಟ್ಟಣದ ಕಿಲ್ಲಾದೊಳಗೆ ಹುಸೇನಿ ಅಲಂ ದರ್ಗಾ ಇರುವುದರಿಂದ ಆಗಸ್ಟ್ 02 ಮತ್ತು 03ನೇ ತಾರೀಕು ಹಾಗೂ ಆಗಸ್ಟ್ 8ಮತ್ತು9 ನೇ ತಾರೀಕಿನಂದು ಜನದಟ್ಟಣಿ ಹೆಚ್ಚಾಗಿರುವ ಕಾರಣ ಟ್ರಾಫಿಕ್ ಸಮಸ್ಯೆ ಹಾಗೂ ಅಪಘಾತವನ್ನ ತಡೆಯಲು ಜನರ ಮದ್ಯ ಬೈಕ್, ಕಾರು ಸಂಚಾರಕ್ಕೆ ನಿರ್ಬಂಧ ಹೆರಲಾಗಿದೆ ಹಾಗೂ ಕಿಲ್ಲಾದ ಒಳಗಿನ ನಿವಾಸಿಗಳು ವೈದ್ಯಕೀಯ ಸೌಲಭ್ಯ ಮತ್ತು ತುರ್ತು ಪರಸ್ಥಿತಿಯಲ್ಲಿ ಮಾತ್ರ ವಾಹನ ಸಂಚಾರ ಮಾಡಬೇಕು, ವಾಹನಸಂಚಾರಕ್ಕಾಗಿ ಆಧಾರ ಕಾರ್ಡ ಹಾಗೂ ವಾಹನ ಚಾಲನೆ ಪರವಾನಿಗೆ ಪತ್ರವನ್ನ ಪೊಲೀಸ್ ಸಿಬ್ಬಂದಿಗಳಿಗೆ ತೋರಿಸಿದರೆ ಮಾತ್ರ ವಾಹನ ಸಂಚಾರಕ್ಕೆ ಅನುವು ಮಾಡಲಾಗುತ್ತದೆ ಸಾರ್ವಜನಿಕರು, ಕಿಲ್ಲಾ ನಿವಾಸಿಗಳು ಸಹಕರಿಸಬೇಕು ಎಂದರು.