ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಮುದಗಲ್ ಮೊಹರಂ ಕಲ್ಯಾಣ ಕರ್ನಾಟಕದ ದಸರಾ ಅದನ್ನು ನಾವು ಅಚ್ಚುಕಟ್ಟಾಗಿ ಆಚರಣೆ ಮಾಡಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಬಿ ನಿಖಿಲ್ ಹೇಳಿದರು.
ಪಟ್ಟಣದ ಭಾರತ್ ಕಲ್ಯಾಣ ಮಂಟಪದಲ್ಲಿ ಮುದಗಲ್ ಮೊಹರಂ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು
ಹಬ್ಬವನ್ನ ನಿಭಾಯಿಸುವ ಕರ್ತವ್ಯ ಸರ್ವ ಇಲಾಖೆಯ ಜವಾಬ್ದಾರಿಯಾಗಿದೆ ಊರಿನ ಪ್ರಮುಖ ಸಮಸ್ಯೆಯಾದ
ನೀರಿನ ಹಾಗೂ ವಿದ್ಯುತ್ ಸಮಸ್ಯೆ ಆಗದಹಾಗೆ ಆಯಾ ಇಲಾಖೆಗಳ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇವೆ ಹಾಗೂ ಸಂಚಾರಿ ಶೌಚಾಲಯ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತೇವೆ ನಾವೆಲ್ಲ ಒಟ್ಟಾಗಿ ಮುದಗಲ್ ಮೊಹರಂ ಆಚರಣೆ ಮಾದರಿಯಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ
ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳೋಣ ಎಂದರು.ನಂತರ ಮಾತನಾಡಿದ ಲಿಂಗಸಗೂರು ಸಹಾಯಕ ಆಯುಕ್ತರಾದ ರಾಹುಲ್ ಮುದಗಲ್ ಮೊಹರಂ ಹಬ್ಬವನ್ನ ನಾವೆಲ್ಲ ಸೇರಿ ವಿಜೃಂಭಣೆಯಿಂದ ಆಚರಣೆ ಮಾಡೋಣ, ಎಲ್ಲ ಇಲಾಖೆಗಳು ಹಬ್ಬದ ಆಚರಣೆ ಸಹಕಾರ ಮುಖ್ಯ ಎಂದರು.ಲಿಂಗಸಗೂರು ಡಿವಾಯ್ ಎಸ್ ಪಿ ಮಂಜುನಾಥ ಸಿಪಿಐ ಸಂಜೀವ್ ಬಾಳಿಗಾರ, ಪಿಎಸ್ಐ ಪ್ರಕಾಶ್ ಡಂಬಳ್, ಲಿಂಗಸಗೂರು ತಹಸೀಲ್ದಾರ್ ಪರಶುರಾಮ, ಪುರಸಭೆ ಮುಖ್ಯಧಿಕಾರಿ ಮರಿಲಿಂಗಪ್ಪ ದರ್ಗಾ ಸಮಿತಿ ಅಧ್ಯಕ್ಷ ಅಮೀರ್ ಬೇಗ್ ಉಸ್ತಾದ್, ಉಪಾಧ್ಯಕ್ಷರಾದ ಗುರುಬಸಪ್ಪ ಸಜ್ಜನ್,
ಎಸ್ ಆರ್ ರಸೂಲ್, ಸಮಿತಿ ಕಾರ್ಯದರ್ಶಿ ಸಾದಿಕ್ ಅಲಿ, ಪುರಸಭೆ ಉಪಾಧ್ಯಕ್ಷ ಶಿವಾಗಪ್ಪ ಬಡಕುರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪಟ್ಟಣದ ವಿವಿಧ ಸಮುದಾಯದ ಮುಖಂಡರು ಇದ್ದರು.