Thursday , September 19 2024
Breaking News
Home / Breaking News / ತಾವರಗೇರಾ: ಪಟ್ಟಣದ ಮುಖಂಡರು ಬಿಜೆಪಿ ಸೇರ್ಪಡೆ..!

ತಾವರಗೇರಾ: ಪಟ್ಟಣದ ಮುಖಂಡರು ಬಿಜೆಪಿ ಸೇರ್ಪಡೆ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ಹಲವು ಮುಖಂಡರು ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಪಟ್ಟಣದ ಮುಖಂಡರಾದ ಚಂದ್ರಶೇಖರ ನಾಲತವಾಡ, ನಾದಿರಪಾಷಾ ಮುಲ್ಲಾ, ಸಾಗರ ಭೇರಿ, ಮಹೇಶ ಬಡಿಗೇರ, ಸಿದ್ದನಗೌಡ ಪುಂಡಗೌಡ್ರ ಸೇರಿದಂತೆ ಇನ್ನಿತರರು ಇಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ಸೇರ್ಪಡೆಗೊಂಡರು.

ಈ ಸಂದರ್ಬದಲ್ಲಿ ದೊಡ್ಡನಗೌಡ ಪಾಟೀಲ್ ಮಾತನಾಡಿ ಮುಖಂಡರ ಪಕ್ಷ ಸೇರ್ಪಡೆಯಿಂದಾಗಿ ನಮ್ಮ ಪಕ್ಷ ಬಲವರ್ಧನೆ ಗೊಂಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಂಗನಗೌಡ ಜೈನರ, ಶಂಕರಗೌಡ ಪಾಟೀಲ, ಮಂಜುನಾಥ ಜೂಲಕುಂಟಿ, ಶಿವರಾಜ ಗೌಡ ಪಾಟೀಲ್, ಶಾಮೂರ್ತಿ ಅಂಚಿ, ಲಕ್ಷ್ಮಣ ಮುಖಿಯಾಜಿ ಇನ್ನಿತರರಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!