ನಾಗರಾಜ್ ಎಸ್ ಮಾಡಿವಾಳರ್
ಮುದಗಲ್ : ಲಿಂಗಸಗೂರು ಶಾಸಕರೇ ನೀವು ಪಾಳೇಗಾರರಲ್ಲ ಎಂದು ಕರವೇ ಅಧ್ಯಕ್ಷ ಎಸ್ ಎ ನಯೀಮ್ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಹಲವು ವರ್ಷಗಳಿಂದ ಸಮಾಜದ ಪರವಾಗಿ, ಬಡವರ ದಿನ ದಲಿತರ ಪರವಾಗಿ ಹೋರಾಟ ಮಾಡುತ್ತಾ ಬಂದಿದೆ ಆದರೆ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ರವರು ಸಂಘಟನೆ ನಿಮ್ಮ ಲಾಭಕ್ಕಾಗಿ ಎನ್ನುವ ಮೂಲಕ ಸಂಘಟನೆ ಬಗ್ಗೆ ಹಗುರವಾಗಿ ಮಾತನಾಡಿ ಇಡೀ ರಾಜ್ಯದ ಕರವೇ ಕಾರ್ಯಕರ್ತರಿಗೆ ಅವಮಾನ ಮಾಡಿದ್ದಾರೆ ಶಾಸಕರು ಕೂಡಲೇ ಬಹಿರಂಗವಾಗಿ ಕ್ಷೇಮೆಯಾಚಿಸಬೇಕು ಇಲ್ಲವಾದರೆ ರಾಜ್ಯದ್ಯಾಂತ ಹೋರಾಟ ಮಾಡಲಾಗುವುದು.
ನಮ್ಮ ಹೋರಾಟ ಪಟ್ಟಣದ ನಿವಾಸಿಗಳಿಗೆ ಮೂಲಭೂತ ಸೌಕರ್ಯವಾದ ಕುಡಿಯುವ ನೀರು ನೀಡಿ ಎಂದು ಶಾಸಕರಿಗೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ, ಸಮರ್ಪಕ ಕುಡಿಯುವ ನೀರು ನೀಡಿ ಎಂದು ಪ್ರತಿಭಟನೆ ಮಾಡಿದರೆ ಅಂತಹ ಸಂಘಟನೆ ವಿರುದ್ಧ ಪ್ರಕರಣ ದಾಖಲಿಸಿ ಎಂದು ಪೊಲೀಸ್ ಇಲಾಖೆಯ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಗೆ ಬೇದರಿಕೆ ಹಾಕಿ ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಹೋರಾಟವನ್ನ ಹತ್ತಿಕ್ಕೂವ ಕೆಲಸ ಮಾಡುತ್ತಾರೆ. ಇಂತಹ ಗೋಡ್ಡು ಬೇದರಿಕೆಗಳಿಗೆ ನಾವು ಬಗ್ಗಲ್ಲ ನೀರು ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ
ಮುಂದಿನ ದಿನಗಳಲ್ಲಿ ಪಟ್ಟಣದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕುಡಿಯುವ ನೀರಿಗಾಗಿ ನಿರಂತರ ಹೋರಾಟ ಮಾಡಲಾಗುವದು ಚುನಾಯಿತ ಜನಪ್ರತಿನಿಧಿಗಳು ಜನರ ಸೇವಾಗಾಗಿ ಆಯ್ಕೆಯಾಗಿರುತ್ತಾರೆ ಎನ್ನುವುದನ್ನ ಜನಪ್ರತಿನಿದಿನಗಳು ಮರೆತಿದ್ದಾರೆ ಎಂದರು. ಕಾರ್ಯಧ್ಯಕ್ಷ ಎಸ್,ಎನ್,ಖಾದ್ರಿ, ನಗರ ಘಟಕ ಅಧ್ಯಕ್ಷ ಸಾಬು ಹುಸೇನ್ ನಾಗರಾಜ ನಾಯಕ, ಮಹಾಂತೇಶ ಚಟ್ಟರ್, ಅಂಗವಿಕರ ಸಂಘದ ಅಧ್ಯಕ್ಷ ಅಬ್ದುಲ್ ಮಜ್ಜಿದ್, ಇಸ್ಮಾಯಿಲ್ ಬಳಿಗಾರ, ಶ್ಯಾಮೀದ್ ಅರಗಂಜಿ, ಅಬ್ದುಲ್ ಮಜ್ಜಿದ್, ರಹೀಮಾನ್ ದುಲಾ, ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇದ್ದರು .