Friday , November 22 2024
Breaking News
Home / Breaking News / ನೀರಿನ ಸಮಸ್ಯೆಗೆ ನಾನು ಹೊಣೆಯಲ್ಲ : ಶಾಸಕ ಡಿ ಎಸ್  ಹೂಲಗೇರಿ 

ನೀರಿನ ಸಮಸ್ಯೆಗೆ ನಾನು ಹೊಣೆಯಲ್ಲ : ಶಾಸಕ ಡಿ ಎಸ್  ಹೂಲಗೇರಿ 

 ನಾಗರಾಜ್ ಎಸ್ ಮಾಡಿವಾಳರ್ 
ಮುದಗಲ್ : ಪಟ್ಟಣದ ನೀರಿನ ಸಮಸ್ಯೆಗೆ ನಾನು ಹೊಣೆಯಲ್ಲ ಎಂದು ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ಹೇಳಿದರು.
 ಗುರವಾರ ಪುರಸಭೆ ತುರ್ತು ಸಭೆ ನಡೆಸಿ ಮಾತನಾಡಿದ ಅವರು ನಾನು ಕ್ಷೇತ್ರದ ಶಾಸಕ ನನಗೆ ಇಡೀ ತಾಲೂಕಿನ ಕೆಲಸಗಳು ಇರುತ್ತವೆ ಮುದಗಲ್ ಪಟ್ಟಣದ ಅಭಿವೃದ್ಧಿಗಾಗಿ ನಾನು ಸಾಕಷ್ಟು ಅನುದಾನ ನೀಡಿದ್ದೇನೆ
 ನೀರಿನ ಸಮಸ್ಯೆ ಪರಿಹಾರ ಮಾಡಲು ವಿದ್ಯುತ್ ಟಿಸಿ ಮತ್ತು ವಾಲ್ ಹಾಗೂ ಜನರೇಟರ್ ಕಲ್ಪಿಸುವ ವ್ಯವಸ್ಥೆ ಮಾಡಿದ್ದೇನೆ.ಆದರೆ ಪುರಸಭೆ ಅಧಿಕಾರಿಗಳು, ಪುರಸಭೆ ಅಧ್ಯಕ್ಷರು ಸದಸ್ಯರು ಅದರ ಜವಾಬ್ದಾರಿ  ಹೊರಬೇಕಾಗುತ್ತದೆ ಜನರಿಗೆ ಸಮರ್ಪಕ ಆಡಳಿತ ನೀಡಬೇಕಾಗುತ್ತದೆ ನಾವು ಒಬ್ಬ ಶಾಸಕರಾಗಿ ಸರಕಾರದ ಮಟ್ಟದಲ್ಲಿ ಪಟ್ಟಣದ ಸಮಸ್ಯೆಗಳ ಬಗ್ಗೆ ದ್ವನಿ ಎತ್ತಿ ವಿಳಂಬವಾದ ಕೆಲಸಗಳನ್ನ ಪ್ರಾರಂಭಮಾಡುವ ನಿಟ್ಟಿನಲ್ಲಿ ನಾವು ಕರ್ತವ್ಯ ಮಾಡುತ್ತಿದ್ದೇನೆ ನನ್ನ ಕರ್ತವ್ಯದಲ್ಲಿ ಲೋಪದೋಷ ಬಂದೆರೆ ನಾನು ರಾಜೀನಾಮೆ ನೀಡುತ್ತೇನೆ. ಜನಪ್ರತಿನಿಧಿನಗಳು ನಿಮ್ಮ ಕೆಲಸಗಳನ್ನ ಮಾಡಿ ಯಾರಿಗೆ ಯಾವ ಜವಾಬ್ದಾರಿ ಎನ್ನುವ ಬಗ್ಗೆ ತಿಳಿದುಕೊಳ್ಳಿ ಪುರಸಭೆ ಅಧಿಕಾರಿಗಳು ಕೆಲಸ ಮಾಡದೇ ಇದ್ದಾಗ ಅವರಿಗೆ ಚಾಟಿ ಬೀಸುವ ಕೆಲಸ ನಿಮ್ಮದು
ಎಲ್ಲದಕ್ಕೂ ಶಾಸಕರನ್ನೇ ಹೊಣೆ ಮಾಡುವುದು ತಪ್ಪು
ಎಂದರು. ನಂತರ ಪುರಸಭೆ ಮುಖ್ಯಧಿಕಾರಿ ಮರಿಲಿಂಗಪ್ಪರನ್ನ  ತರಾಟೆಗೆ ತೆಗೆದುಕೊಂಡು ನೀವು ಸಾರ್ವಜನಿಕ ಸೇವೆಗಾಗಿ ಬಂದಿರುವುದು ನಿಮ್ಮ ಲೋಪದೋಷಗಳಿಂದ ಜನಪ್ರತಿನಿಧಿನಗಳು ಸಾರ್ವಜನಿಕರ ಬಾಯಿಗೆ ತುತ್ತಾಗುತ್ತಿದ್ದಾರೆ ನೀವು ಸರಿಯಾದ ರೀತಿಯಲ್ಲಿ ಕೆಲಸ ಮಾಡಿ ಎಂದರು. ಸಭೆಯಲ್ಲೇ 24×7 ಕುಡಿಯುವ ನೀರಿನ ಯೋಜನೆ ಕಾಮಗಾರಿ ಗುತ್ತಿಗೆದಾರರ ಜೊತೆ ಮಾತನಾಡಿ ಅರ್ಧಕ್ಕೆ ನಿಂತಿರುವ ನೀರಿನ ಟ್ಯಾಂಕ್ ಕಾಮಗಾರಿಯನ್ನ  ಪೂರ್ಣಗೊಳಿಸಿ ನೀರಿನ ಟ್ಯಾಂಕ್ ಸಿದ್ದಪಡಿಸಿ ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಶಿವಾಗಪ್ಪ ಬಡಕುರಿ,ಮುಖ್ಯಧಿಕಾರಿ ಮರಿಲಿಂಗಪ್ಪ, ಮುಖ್ಯ ವ್ಯವಸ್ಥಾಪಕ ಮಲ್ಲಿಕಾರ್ಜುನ, ಪುರಸಭೆ ಸದಸ್ಯರಾದ ಗುಂಡಪ್ಪ ಗಂಗಾವತಿ, ತಸ್ಲೀಮ್ ಮುಲ್ಲಾ, ಅಜ್ಮಿರ್ ಸಾಬ್ ಬೆಳ್ಳಿಕಟ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾಹುದ್ ಸಾಬ್, ನೈಮತ್ತುಲ್ಲಾ ಖಾದ್ರಿ, ರಘುವೀರ್, ಕೃಷ್ಣ ಚಲುವಾದಿ  ಸೇರಿದಂತೆ ಇನ್ನಿತರ ಮುಖಂಡರು, ಅಧಿಕಾರಿಗಳು ಇದ್ದರು.

About Nagaraj M

Check Also

ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …

error: Content is protected !!