ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಸಿದ್ದು ಬಂಡಿ ರವರು ಮುಸ್ಲಿಂ ಮುಖಂಡನ ತೇಜೋವಧೆಗಿಳಿದಿದ್ದಾರೆ ಎಂದು ಮುದಗಲ್ ಪುರಸಭೆ ಸದಸ್ಯ ಎಸ್ ಆರ್ ರಸೂಲ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಎರೆಡು ವರ್ಷದ ಹಿಂದೆ ಆಗಿನ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಕುಮಾರಸ್ವಾಮಿ ರವರಿಗೆ ಅಲ್ಪಸಂಖ್ಯಾತರ ರಾಯಚೂರು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಪತ್ರ ತಲುಪಿಸಿದ್ದೇನೆ. ಆದರೆ ಪ್ರಸ್ತುತ ಲಿಂಗಸಗೂರು ತಾಲೂಕಾಧ್ಯಕ್ಷ ಬಸವರಾಜ ಮಾಕಾಪುರ ಎಸ್ ಆರ್ ರಸೂಲ್ ರನ್ನ ಉಚ್ಛಾಟನೆ ಮಾಡಿದ್ದೇವೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಎರೆಡು ವರ್ಷಗಳ ಮೊದಲೇ ರಾಜೀನಾಮೆ ನೀಡಿದ್ದ ನನ್ನನ್ನು ತಮ್ಮ ಪಕ್ಷದಿಂದ ಹೇಗೆ ಉಚ್ಛಾಟನೆ ಮಾಡುತ್ತಾರೆ ನಾನು ಅವರ ಪಕ್ಷದಲ್ಲೇ ಇಲ್ಲ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಸಿದ್ದು ಬಂಡಿ ಮತ್ತು ತಾಲೂಕಧ್ಯಕ್ಷರಿಗೆ ಬುದ್ದಿ ಭ್ರಮಣೆಯಾಗಿದೆ ಅವರು ಹುಚ್ಚಾಸ್ಪತ್ರೆಗೆ ದಾಖಲಾಗಲಿ ನಾವು ಐದು ಬಾರಿ ಜನರಿಂದ ಜನಪ್ರತಿನಿಧಿಯಾಗಿ ಆಯ್ಕೆ ಯಾಗಿದ್ದೇವೆ.
ಆದರೆ ಸಿದ್ದು ಬಂಡಿ ಒಂದು ಗ್ರಾಮ ಪಂಚಾಯತ ಸದಸ್ಯ ಕೂಡ ಆಗಿಲ್ಲ ಲಿಂಗಸಗೂರು ತಾಲೂಕಿನಲ್ಲಿ ಸಿದ್ದು ಬಂಡಿ ಜೆಡಿಎಸ್ ಪಕ್ಷದ ಮುಖಂಡ ಅದೇ ಸಿದ್ದು ಬಂಡಿ ಹುನುಗುಂದ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದಾರೆ ಇಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವವರು ಯಾರು ಎಂದು ತಿಳಿದುಕೊಳ್ಳಲಿ ಜೆಡಿಎಸ್ ಪೊಲೀಗ್ ಎಜೇಂಟ್ ಕೂಡ ಸಿಗದ ಗ್ರಾಮಗಳಲ್ಲಿ ಲೀಡ್ ಮಾಡಿ ತೋರಿಸಿದ್ದೇನೆ ಶಂಬಣ್ಣ ಪುಲಾಭಾವಿ ಹಾಗೂ ನಾಗಭೂಷಣ ತಮ್ಮ ಸ್ವಂತ ಹಣದಲ್ಲಿ ಪಕ್ಷ ಸಂಘಟನೆ ಮಾಡಿ 50ಸಾವಿರ ಮತಗಳನ್ನ ಪಡೆಯಲು ಮುಖ್ಯ ಕಾರಣವಾದವರನ್ನೇ ವಿನಾಕಾರಣವಾಗಿ ಉಚ್ಛಾಟನೆ ಮಾಡುವ ಮೂಲಕ ಲಿಂಗಾಯತ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಅದೇ ರೀತಿ ಮುಸ್ಲಿಂ ಧರ್ಮದ ಮುಖಂಡನ ತೇಜೋವದೆಗೆ ಸಿದ್ದು ಬಂಡಿ ಮುಂದಾಗಿದ್ದಾರೆ ನನ್ನ ವಾರ್ಡಿನ ಅಭಿವೃದ್ಧಿ ಬಗ್ಗೆ ಶಾಸಕರ ಸಂಪರ್ಕದಲ್ಲಿರುವುದು ಸತ್ಯ ನಾನು ನನ್ನ ಕೆಲಸವನ್ನ ಪ್ರಾಮಾಣಿಕವಾಗಿ ಮಾಡಿದ್ದೇನೆ ನಾನು ಯಾವುದೇ ಪಕ್ಷದಲ್ಲಿಯೂ ಇಲ್ಲ ನಾನು ಸ್ವಾತಂತ್ರ್ಯವಾಗಿದ್ದೇನೆ ಎಂದರು.