ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಸ್ವಾರ್ಥ ಮರೆತು ನಿಸ್ವಾರ್ಥ ಸೇವೆಯಲ್ಲಿ ತಾವರಗೇರಾ ಪಟ್ಟಣವೂ ತಾಲೂಕಿನಲ್ಲಿಯೇ ಪ್ರಥಮವಾಗಿ ಕಾಣಿಸಿಕೊಳ್ಳುವಲ್ಲಿ ಯುವ ಮುಖಂಡ ಚಂದ್ರಶೇಖರ ನಾಲತವಾಡ ಹಾಗೂ ಇನ್ನಿತರರ ಸೇವೆ ಕೂಡ , ರಾಜ್ಯಕ್ಕೆ ಮಾದರಿ ಯಾಗಲಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಸೋಮುವಾರದಂದು ಪಟ್ಟಣದ ಶ್ರೀ ಮತಿ ನಾಗಮ್ಮ ಆದಪ್ಪ ನಾಲತವಾಡ ಟ್ರಸ್ಟ್ ವತಿಯಿಂದ, ಶ್ರೀ ಮತಿ ಶಶಿಕಲಾ ಚಂದ್ರಶೇಖರ ನಾಲತವಾಡ ವಸತಿ ನಿಲಯದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಂತರ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ನಾಗಪ್ಪ ಸಾಲೋಣಿ ಮಾತನಾಡಿ, ಚಂದ್ರಶೇಖರ ನಾಲತವಾಡ ಚಿಕ್ಕ ವಯಸ್ಸಿನಲ್ಲಿಯೇ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಸರ್ವ ಜನಾಂಗದ ಹಿತ ಕಾಪಾಡುವಲ್ಲಿ ಮುಂಚೂಣಿ ನಾಯಕನಾಗಿ ಬೆಳೆದದ್ದು ಹೆಮ್ಮೆಯ ವಿಷಯ, ಉಳಿದ ಸಮಾಜಗಳೊಂದಿಗೆ ಬೆರೆತು ಉತ್ತಮ ಕಾರ್ಯಕ್ರಮಗಳನ್ನು ನಡೆಸುವ ಮೂಲಕ, ಉತ್ತಮ ನಾಯಕನಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಸ್ಥಳೀಯ ವಾಣಿಜ್ಯ ಉದ್ಯಮಿ ಅಯ್ಯನಗೌಡ ಮಾಲಿ ಪಾಟೀಲ, ಪ್ರಗತಿ ಪರ ರೈತರಾದ ದೇವೆಂದ್ರಪ್ಪ ಬಳೂಟಗಿ, ಶೇಖರಗೌಡ ಪೊಲೀಸ್ ಪಾಟೀಲ, ಮುಖಂಡ ನಾದಿರ ಪಾಷಾ ಮುಲ್ಲಾ, ವೀರಭದ್ರಪ್ಪ ನಾಲತವಾಡ, ಬಸಪ್ಪ ನಾಲತವಾಡ, ಪಪಂ ಸದಸ್ಯರಾದ ವೀರನಗೌಡ ಪಾಟೀಲ್, ಕರಡೆಪ್ಪ ನಾಲತವಾಡ, ಶುಕುರ್ ಬನ್ನು, ಶ್ರೀ ಮತಿ ನಾಗಮ್ಮ ನಾಲತವಾಡ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಇನ್ನಿತರ ಗಣ್ಯರು ಮತ್ತು ವಿವಿಧ ಶಾಲೆಯ ಮುಖ್ಯ ಗುರುಗಳು ಹಾಗೂ ಮುಖಂಡರಾದ ಸಾಗರ ಬೇರಿ, ಕಳಕನಗೌಡ ಪಾಟೀಲ್, ಚೆನ್ನಪ್ಪ ನಾಲತವಾಡ,ಮಂಜುನಾಥ ಜೂಲಕುಂಟಿ, ಸಂಗಪ್ಪ ಗುರಿಕಾರ ಸೇರಿದಂತೆ ಸ್ಥಳೀಯ ಮುಖಂಡರು, ಹಾಗೂ ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಾಸ್ತಾವಿಕ ವಾಗಿ ಚಂದ್ರಶೇಖರ್ ನಾಲತವಾಡ ಮಾತನಾಡಿದರು. ಪ್ರಾಚಾರ್ಯ ಲಕ್ಷ್ಮ ಸಿಂಗ್ ವಗರನಾಳ, ಜಗದೀಶ್ ಸೂಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.