Tuesday , September 17 2024
Breaking News
Home / Breaking News / ತಾವರಗೇರಾ: ಸಂಭ್ರಮದ ಸಾಮೂಹಿಕ ವಿವಾಹ..!

ತಾವರಗೇರಾ: ಸಂಭ್ರಮದ ಸಾಮೂಹಿಕ ವಿವಾಹ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸಾಮೂಹಿಕ ವಿವಾಹಗಳು ಬಡವರ ಆಶಾ ಕಿರಣಗಳಾಗಿದ್ದು ಇಂತಹ ವಿವಾಹಗಳು ನಡೆಸಿಕೊಡುವುದು ಶ್ಲಾಘನೀಯ ಎಂದು ಎಂ ಗುಡದೂರಿನ ಶ್ರೀ ನೀಲಕಂಠ ತಾತನವರು ಹೇಳಿದರು.

ಅವರು ಪಟ್ಟಣದ ಮೇಗಾ ಫಂಕ್ಷನ್ ಹಾಲನಲ್ಲಿ ನಡೆದ ಚೇತನಾ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ತಾವರಗೇರಾ ಹಾಗೂ ರೆಡ್ಡಿ ವೀರಣ್ಣ ಕನಸ್ಟ್ರಕ್ಷನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಒಟ್ಟು 50 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು, ಕಾರ್ಯಕ್ರಮದಲ್ಲಿ ಅಂಕಲಿಮಠದ ಶ್ರೀ ಪಕೀರೇಶ್ವರ ಮಹಾ ಸ್ವಾಮಿಗಳು ಸೇರಿದಂತೆ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಎಂಎಲ್ ಸಿ ಶರಣೇಗೌಡ ಬಯ್ಯಾಪುರ, ಮಾಜಿ ಸಚಿವರಾದ ಎಂ ಮಲ್ಲಿಕಾರ್ಜುನ ನಾಗಪ್ಪ, ಸಾಲೋಣಿ ನಾಗಪ್ಪ, ದೊಡ್ಡನಗೌಡ ಪಾಟೀಲ, ಜೀ ವಿರಪ್ಪ ಕೆಸರಹಟ್ಟಿ , ಸ್ಥಳೀಯ ಚೇತನ ಬ್ಯಾಂಕಿನ ಅಧ್ಯಕ್ಷ ರಾದ ಅಯ್ಯನಗೌಡ ಮಾಲಿ ಪಾಟೀಲ್ ಹಾಗೂ ಬ್ಯಾಂಕಿನ ನಿರ್ದೇಶಕ ರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸೇರಿದಂತೆ ಪಟ್ಟಣದ ವಿವಿಧ ಸಂಸ್ಥೆಗಳ ಗಣ್ಯರು, ಪದಾಧಿಕಾರಿಗಳು ಹಾಗೂ ಪ್ರಮುಖರು ವಿವಾಹ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ನೂತನ ವಧು, ವರರಿಗೆ ಶುಭ ಹಾರೈಸಿದರು.

ಜನಸಾಗರ ಜಾತ್ರೆ:- ಪಟ್ಟಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ಜನರನ್ನು ನೋಡಿದಾಗ, ಜಾತ್ರೆಯಂತೆ ಕಂಡುಬಂದಿತು. ಅದರಂತೆ ಪ್ರಾಯೋಜಕರು ಕೂಡ ಅಚ್ಚು ಕಟ್ಟಾದ ರೂಪದಲ್ಲಿ ಊಟ ಹಾಗೂ ಮದುವೆಯ ವ್ಯವಸ್ಥೆಯನ್ನು ಮಾಡಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಯಿತು. ಈ ಸಂದರ್ಭದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!