ವರದಿ : ನಾಗರಾಜ್ ಎಸ್ ಮಡಿವಾಳರ
ಲಿಂಗಸುಗೂರ : ವೀರಶೈವ ಲಿಂಗಾಯತರಿಂದ ಲಿಂಗಸಗೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿದ್ದು ವಾಯ್ ಬಂಡಿರನ್ನ ಲಿಂಗಸಗೂರು ತಾಲೂಕ ವೀರಶೈವ ಸಮಾಜ ಬಹಿಷ್ಕರಿಸಿದೆ ಎಂದು ಸಮಾಜ ಮುಖಂಡ ದೊಡ್ಡ ಬಸವ ಅಂಗಡಿ ಹೇಳಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ ನಾಗಭೂಷಣ ರವರನ್ನ ತಾಲೂಕಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಿರುವುದು ಖಂಡನೀಯ
ಜೆಡಿಎಸ್ ಪಕ್ಷದ ನಡೆ ಸಮಾಜಕ್ಕೆ ಬೇಸರ ತಂದಿದೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 2 ನೇ ಸ್ಥಾನದಲ್ಲಿರಲು ನಾಗಭೂಷಣರವರು ಹಗಲಿರುಳು ಶ್ರಮಿಸಿರುವುದನ್ನ ಜೆಡಿಎಸ್ ಪಕ್ಷ ಹಾಗೂ ತಾಲೂಕಿನ ವೀರಶೈವ ಲಿಂಗಾಯತ ಸಮಾಜ ಕಂಡಿದೆ ಇದೀಗ ರಾಯಚೂರು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಎಂ ವಿರುಪಾಕ್ಷರವರು ಸುಳ್ಳು ಆರೋಪಕ್ಕೆ ಕಿವಿಗೊಟ್ಟು ಏಕಾ ಏಕಿ ತಾಲೂಕಧ್ಯಕ್ಷರನ್ನ ಉಚ್ಚಾಟಿಸಿರುವುದನ್ನ ಖಂಡಿಸಿ ಜೆಡಿಎಸ್ ಪಕ್ಕದ ಅಭ್ಯರ್ಥಿ ಸಿದ್ದು ಬಂಡಿ ರವರು ಯಾವುದೇ ಪಕ್ಷದಿಂದ ಯಾವುದೆ ಕ್ಷೇತ್ರದಲ್ಲಿ ಚುನಾವಣೆ ನಿಂತರು ಕೂಡ ವೀರಶೈವ ಲಿಂಗಾಯತ ಸಮಾಜ ಅವರನ್ನು ಬಹಿಷ್ಕರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿದ್ರಾಮಪ್ಪ ಕಾರಲಾಕುಂಟಿ, ನಾಗರಾಜ, ಗುರುಬಸಪ್ಪ ಸಾಹುಕಾರ, ಜಗದೀಶ ,ವೀರೇಶ ಸಾಲಮನಿ ಇದ್ದರು.