ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪ್ರೇಮಿಗಳಿಬ್ಬರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಅಡವಿಬಾವಿ ಗ್ರಾಮದಲ್ಲಿ ನಡೆದಿದೆ.
ಅದೇ ಗ್ರಾಮದ ಅಮರೇಶ ಮಾಲಿಪಾಟೀಲ (21) ಹಾಗೂ ಯಲ್ಲಮ್ಮ ಗೋನಾಳ (18) ಎಂದು ತಿಳಿದು ಬಂದಿದ್ದು ಈಗಾಗಲೇ ಈ ಇಬ್ಬರಿಗೆ ನಿಶ್ಚಿತಾರ್ಥ ಆಗಿದ್ದರು ಕೂಡ ಇಂದು ಯುವತಿಯ ಮನೆಯಲ್ಲಿ ನೇಣು ಹಾಕಿಕೊಂಡು ಇಬ್ಬರು ನೇಣಿಗೆ ಶರಣಾಗಿದ್ದು,
ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಎರಡೂ ಕುಟುಂಬಸ್ಥರಲ್ಲಿ ದುಖಃ ಮಡುಗಟ್ಟಿದ ಘಟನೆ ನಡೆದಿದೆ, ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪಿಎಸ್ಐ ವೈಶಾಲಿ ಝಳಕಿ ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾಗಿ ತಿಳಿಸಿದ್ದಾರೆ.