ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಕಳ್ಳತನವಾದ 2ಲಕ್ಷ 80ಸಾವಿರ ರೂಪಾಯಿಗಳ ಮೌಲ್ಯದ 6 ಬೈಕ್ ಮತ್ತು ಇಬ್ಬರು ಬೈಕ್ ಕಳ್ಳರನ್ನ ವಶಕ್ಕೆ ಪಡಿಸಿಕೊಂದಿದ್ದಾರೆ.
ಲಿಂಗಸಗೂರು ಡಿ ವೈ ಎಸ್ ಪಿ ಎಸ್ ಎಸ್ ಹುಲ್ಲೂರು ಮತ್ತು ಸಿಪಿಐ ಸಂಜೀವ ಬಳಿಗಾರ ಮಾರ್ಗದರ್ಶನದಲ್ಲಿ ಪಿಎಸ್ಐ ಪ್ರಕಾಶ್ ಡಂಬಳ ಮತ್ತು ಸಿಬ್ಬಂದಿಗಳು ವಿಶೇಷ ಕಾರ್ಯಾಚರಣೆಯಲ್ಲಿ ಚಾಲಾಕಿ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ ಆರೋಪಿಗಳು ಸಮೀಪದ ಗುಡಿಹಾಳ ಗ್ರಾಮದ ಅಪ್ಪಾಜಿ ತಂದೆ ಸಂಗಪ್ಪ ದೊಡ್ಡಮನಿ ಇನ್ನೊರ್ವ ಪಟ್ಟಣದ ಮೇಗಳಪೇಟೆಯ ಶ್ರೀಧರ್ ಎಂದು ಗುರುತಿಸಲಾಗಿದೆ.
ಸ್ಥಳೀಯ ಪೊಲೀಸರು ಪಟ್ರೋಲಿಂಗ ಮಾಡುತ್ತಿರುವಾಗ ಮೇಗಳಪೇಟೆ ಅಂಕಲಿಮಠ ಕ್ರಾಸ್ ಬಳಿ ಇಬ್ಬರು ಯುವಕರು ಅನುಮಾನಸ್ಪದವಾಗಿ ಸ್ಕ್ಯೂಟಿ ಮೇಲೆ ತಿರುಗಾಡುತ್ತಿರುವುದನ್ನು ಗಮನಿಸಿ ಅವರನ್ನು ನಿಲಿಸಿ ಅವರನ್ನು ವಿಚಾರಿಸಿ ವಾಹನವ ದಾಖಲಾತಿಗಳನ್ನು ನೀಡುವಂತೆ ಕೇಳುತ್ತಾರೆ , ದಾಖಲಾತಿಗಳನ್ನು ತೋರಿಸದೆ ಇದ್ದರಿಂದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅವರಿಬ್ಬರು ದಿನಾಂಕ 01-03-2022 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಕನಾಪೂರಹಟ್ಟಿ ಗ್ರಾಮದಲ್ಲಿ ಜರುಗಿದ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಮತ್ತು ಬೇರೆ ಬೇರೆ ಸ್ಥಳಗಳಲ್ಲಿ ಬೈಕ್ ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ಒಪ್ಪಿಕೊಳ್ಳುತ್ತಾರೆ ನಂತರ ಆರೋಪಿಗಳಿಂದ ಬಜಾಜ್ ಪ್ಲಾಟಿನಾ ಬೈಕ್ ಚಸ್ಸಿ ನಂಬರ್ MDZ000ZZZRWC18122, ಹೆಚ್.ಎಫ್ ಡಿಲೇಕ್ಸ್ ಕೆಂಪು ಬಣ್ಣದ ಬೈಕ್ ಚಸ್ಸಿ ನಂಬರ್ MBLHA11ALE9J08415, ಹಿರೋ ಸ್ಟೆಂಡರ್ ಬೈಕ್ ಆದರ ಚೆಸ್ಸಿ ನಂಬರ MBLHAWO8KIHK52218 ಹಿರೋ ಸೆಂಡರ್ ಬೈಕ್ ಅದರ ಚೆಸ್ಸಿ ನಂಬರ MBLIHA10A DHM17887, ಡಿ ಓ ಕಂಪನಿಯ ಸ್ಕೂಟಿ ಸೇರಿ ಆರೋಪಿಗಳಿಂದ ಒಟ್ಟು ರೂ. 2,80,000/- ಬೆಲೆ ಬಾಳುವ ಬೈಕ್ ಗಳನ್ನು ವಶಪಡಿಸಿಕೊಂಡು ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪೊಲೀಸರ ಚುರುಕು ನಡಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.