ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಆಸ್ತಿಗೋಸ್ಕರ ತಾಯಿಯನ್ನು ಕೊಲೆ ಮಾಡಿದ ದ್ವೇಷದ ಹಿನ್ನೆಲೆಯಲ್ಲಿ ತನ್ನ ಸಂಭಂದಿಕನನ್ನು ಕೊಲೆ ಮಾಡಿ ಮುಚ್ಚಿ ಹಾಕಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ, ಸತ್ಯಾಂಶ ಹೊರ ತರುವಲ್ಲಿ ಯಶಸ್ವಿಯಾದ ಘಟನೆ ತಾವರಗೇರಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆ ಮಾಡಿದ ಆರೋಪಿ ಬಸವರಾಜ ಕರಡಕಲ್ (26) ಕೂಡ್ಲೂರ ಇವನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ ಘಟನೆ ನಡೆದಿದೆ.
ಘಟನೆ ವಿವರ:- ಆಸ್ತಿಗೆ ಸಂಬಂಧಿಸಿದಂತೆ 9 ವರ್ಷಗಳ ಹಿಂದೆ ತನ್ನ ತಾಯಿಯನ್ನು ಕೊಲೆ ಮಾಡಿದ ಹಿನ್ನೆಲೆಯಲ್ಲಿ ದ್ವೇಷ ಇಟ್ಟುಕೊಂಡಿದ್ದ ಬಸವರಾಜ ಕರಡಕಲ್ ತನ್ನ ಸಂಬಂಧಿಯಾದ ವೀರಭದ್ರಪ್ಪ ಕರಡಕಲ್ (58) ನನ್ನು ಮುಗಿಸಲು ಸಂಚು ನಡೆಸಿದ್ದು, 17-03-2022 ರಂದು ವೀರಭದ್ರಪ್ಪ ನ ಮನೆಗೆ ಹೋಗಿ ಕಲ್ಲಿನಿಂದ ಮುಖಕ್ಕೆ ಮತ್ತು ತಲೆಗೆ ಹೊಡೆದು ಕೊಲೆ ಮಾಡಿ, ಮನೆಯ ಅಂಕಣದ ಎಮ್ಮೆ ಕಟ್ಟುವ ಜಾಗದಲ್ಲಿ ಬಿಸಾಕಿದ್ದು, ಎಮ್ಮೆಗಳು ತುಳಿದು ಸತ್ತಿರುತ್ತಾನೆಂಬ ಸಾಕ್ಷಿ ನಾಶ ಮಾಡಿದ್ದು ಇದನ್ನು ಪತ್ತೆ ಹಚ್ಚುವಲ್ಲಿ ಕೊಪ್ಪಳ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಗಂಗಾವತಿ ಡಿವಾಯಎಸ್ ಪಿ ಅವರ ಮಾರ್ಗದರ್ಶನದಲ್ಲಿ ಕುಷ್ಟಗಿ ಸಿಪಿಐ ಎನ್ ಆರ್ ನಿಂಗಪ್ಪ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಸ್ಥಳೀಯ ಪಿಎಸ್ಐ ವೈಶಾಲಿ ಝಳಕಿ, ಎಎಸ್ಐ ಮಲ್ಲಪ್ಪ ವಜ್ರದ, ಹಾಗೂ ದುರುಗಪ್ಪ ಎಎಸ್ಐ, ಸಿಬ್ಬಂದಿಗಳಾದ ಗುಂಡಪ್ಪ, ಬಸವರಾಜ, ಕರಿಯಪ್ಪ ಸೇರಿದಂತೆ ಸಿಬ್ಬಂದಿಗಳು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತಂತೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಸಿಪಿಐ ಎನ್ ಆರ್ ನಿಂಗಪ್ಪ ತಿಳಿಸಿದ್ದಾರೆ.