ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ : ಪತ್ರಿಕೆಗಳಿಗೆ ಸುದ್ದಿ ನೀಡುವುದು ಕಷ್ಟದ ಕೆಲಸವಾಗಿರುತ್ತದೆ ಎಂದು ಜುಮಲಾಪುರ ಗ್ರಾಮದ ಕಲಾವಿದ ಬಸವರಾಜ ಬಡಿಗೇರ ಅಭಿಪ್ರಾಯವ್ಯಕ್ತಪಡಿಸಿದರು..!
ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ‘ತಾವರಗೇರಾ ನ್ಯೂಸ್ ‘ (ವೆಬ್ ಪೋರ್ಟಲ್) ಪತ್ರಿಕೆಯ ನಾಲ್ಕನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವರ್ತಮಾನ, ಭೂತಕಾಲ ಹಾಗೂ ಭವಿಷ್ಯದ ಸುದ್ದಿಗಳನ್ನು ನೀಡುವುದು ಪತ್ರಿಕೆಗಳ ಕೆಲಸವಾಗಿದೆ. ಆದರೆ, ಇಂದಿನ ಆಧುನಿಕ ಯುಗದಲ್ಲಿ ಮೂರು ಕಾಲದ ಸುದ್ದಿಗಳನ್ನು ನೀಡುವುದು ಬಹಳಷ್ಟು ಕಷ್ಟವಾಗಿರುತ್ತದೆ ಎಂದರು. ‘ಕೃಷಿ ಪ್ರಿಯ’ ಪತ್ರಿಕೆಯ ಸಂಪಾದಕ ಶರಣಪ್ಪ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಬೆಳಕ ಚೆಲ್ಲುವ ಕಾರ್ಯ ಮೊದಲು ಜರುಗಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪತ್ರಿಕೆ ಅಂದು, ಇಂದು ವಿಷಯ ಕುರಿತು ವರದಿಗಾರ ವಿ.ಆರ್.ತಾಳಿಕೋಟಿ ಮಾತನಾಡಿದರು. ಯುವ ಚಿತ್ರ ನಟ ಅಜಯರಾವ್ ಮಾತನಾಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸದಸ್ಯ ಹಾಗೂ ಸಂಘದ ಜಿಲ್ಲಾ ಮಾಜಿ ಅಧ್ಯಕ್ಷ ಸಾಧಿಕ್ ಅಲಿ, ಎಸ್ಡಿಎಂಸಿ ಅಧ್ಯಕ್ಷ ಕನಕಪ್ಪ ಹುಡೇಜಾಲಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಗ್ರಾ.ಪಂ.ಸದಸ್ಯ ಶಶಿಧರಗೌಡ ಪಾಟೀಲ್,ದುರಗೇಶ ಇದ್ಲಾಪೂರ, ಶಿಕ್ಷಕ ಬಸವರಾಜ ಬಾಗಲಿ, ಪತ್ರರ್ತರಾದ ತಿರುಪತಿ ಯಲಿಗಾರ, ಚಂದ್ರು ಕುಂಬಾರ, ಭೀಮನಗೌಡ ಪಾಟೀಲ, ಸುಭಾಸ ಜುಮಲಾಪೂರು, ಪ್ರಕಾಶ ಬೆದವಟ್ಟಿ , ಮಂಜುನಾಥ ಕೋಳೂರ,ಠ ಎನ್. ಶಾಮಿದ್, ಮಂಜುನಾಥ, ಹೇಮರಾಜ ವೀರಾಪೂರ, ಮುಖಂಡ ಅನಿಲಕುಮಾರ ಬೇಗಾರ, ಶರಣಪ್ಪ ಲೈನದ, ಹನುಮೇಶ ಗರ್ಜನಾಳ, ತಾವರಗೇರಾ ನ್ಯೂಜ್ ಪತ್ರಿಕೆ ಸಂಪಾದಕ ಆರ್.ಬಿ. ಅಲಿ ಆದೀಲ್, ಉಪ ಸಂಪಾದಕ ಅಮಾಜೇಪ್ಪ ಜುಮಲಾಪೂರು ಸೇರಿದಂತೆ ಇನ್ನಿತರರಿದ್ದರು.
ಕ್ಯಾಲೆಂಡರ್ ಬಿಡುಗಡೆ : ತಾವರಗೇರಾ ನ್ಯೂಸ್ ಪತ್ರಿಕೆಯ ನಾಲ್ಕನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ 2022 ರ ಕ್ಯಾಲೆಂಡರ್ ಅನ್ನು ಈ ಸಮಾರಂಭದಲ್ಲಿ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಹಾಗೂ ಸಂಘದ ಮಾಜಿ ಜಿಲ್ಲಾಧ್ಯಕ್ಷ ಸಾಧಿಕ್ ಅಲಿ ಅವರು ಬಿಡುಗಡೆಗೊಳಿಸಿದರು..!!