ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ : ಪಟ್ಟಣ ಸೇರಿದಂತೆ ಹೋಬಳಿ ಯಾದ್ಯಂತ ಗುಡುಗು ಸಿಡಿಲಿನ ಸಹಿತ ಮಳೆಯಾಗಿದ್ದು ಕೆಲವೊಂದು ಕಡೇ ಆಣೆಕಲ್ಲು ಮಳೆ ಸುರಿದಿರುವುದು ವಿಶೇಷವಾಗಿದೆ.
ಹಾಗೂ ಸಮೀಪದ ಮೆತ್ತಿನಾಳ ಗ್ರಾಮದಲ್ಲಿ ಮಾತ್ರ ಆಣೆಕಲ್ಲು ಮಳೆ ಆಗಿದ್ದು ಯಾವುದೇ ಹಾನಿ ಸಂಭವಿಸಿಲ್ಲ, ಅದೇ ರೀತಿ ಸಂಗನಾಳ, ಕನ್ನಾಳ, ತೆಮ್ಮಿನಾಳ, ಗಂಗನಾಳ ಸೇರಿದಂತೆ ಈ ಭಾಗದಲ್ಲಿ ಮಳೆ ಸುರಿದಿದೆ. ರೈತರಿಗೆ ವರ್ಷದ ಮೊದಲ ಮಳೆಯ ಆನಂದವೇ ಆನಂದ..
ಅದರಲ್ಲಿ ಆಣೆಕಲ್ಲು ತುಣುಕುಗಳನ್ನು ಕಂಡ ಮಕ್ಕಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಕೆಡುಕಿನ ಮಳೆ ಎಂದು ಹೇಳುವ ಕೃಷಿಕರು ಇಂತಹ ಹಳೆ ಮಳೆ ಸುರಿಯುವುದರಿಂದ ಮುಂದೆ ಮಳೆ ಕಡಿಮೆ ಪ್ರಮಾಣದಲ್ಲಿ ಆಗುವ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಏನೇ ಆಗಲಿ, ಉರಿಯುವ ಬಿಸಿಲಿಗೆ ಬಸವಳಿದ ಜನರು ವರ್ಷದ ಮೊದಲ ಮಳೆ ಬಗ್ಗೆ ಹರ್ಷ ಕೂಡಾ ವ್ಯಕ್ತಪಡಿಸಿದ್ದಾರೆ..!!
ವಾರ್ಡ ನ ನಿವಾಸಿಗಳಿಗೆ ತೊಂದರೆ: ಪಟ್ಟಣದ 12 ನೇ ವಾರ್ಡಿನಲ್ಲಿ ಇತ್ತೀಚೆಗೆ ನಿರ್ಮಿಸಿದ ಸಿಸಿ ರಸ್ತೆ ಯಿಂದಾಗಿ ನೀರು ಹರಿದು ಹೋಗಲು ಪಪಂ ವತಿಯಿಂದ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದರಿಂದಾಗಿ ಅಲ್ಲಿನ ನಿವಾಸಿ ಗಿರಿಯಪ್ಪಗೌಡ ಪಾಟೀಲ ಅವರ ಮನೆ ಹತ್ತಿರ ಮಳೆ ನೀರು ಸೇರಿದಂತೆ ದಿನನಿತ್ಯದ ವಾರ್ಡ ನ ಎಲ್ಲಾ ನೀರು ಹರಿದು ಬರುವದರಿಂದಾಗಿ ಮನೆಯವರಿಗೆ ತೀವ್ರ ತೊಂದರೆ ಯಾಗಿದ್ದು ತಕ್ಷಣವೇ ಈ ಬಗ್ಗೆ ಪಪಂ ಅಧಿಕಾರಿಗಳು ಹಾಗೂ ವಾರ್ಡಿನ ಸದಸ್ಯರು ಗಮನ ಹರಿಸಿ ತೊಂದರೆ ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.