ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದ ಪುರಸಭೆ ಅಧ್ಯಕ್ಷಗಿರಿ ಆಡಳಿತ ಕಾಂಗ್ರೆಸ್ ಪಕ್ಷದ 15- 15 ಸೂತ್ರದ ಅಧ್ಯಕ್ಷ ಸ್ಥಾನ ಹಂಚುವ ನಿರ್ಣಯದಂತೆ ಕಳೆದ 5ತಿಂಗಳ ಹಿಂದೆ ಪುರಸಭೆ ಅಧ್ಯಕ್ಷೆಯಾಗಿದ್ದ ಅಮೀನ ಬೇಗಂ ಮಹೇಬೂಬ್ ಸಾಬ್ ಬಾರಿಗಿಡ 15 ತಿಂಗಳ ಕಾಲ ಪುರಸಭೆ ಅಧ್ಯಕ್ಷರಾಗಿ ಉತ್ತಮ ಆಡಳಿತ ನಡೆಸಿ ಬಳಿಕ ಸ್ವಯಂ ಪ್ರೇರಿತರಾಗಿ ಲಿಂಗಸಗೂರು ಸಹಾಯಕ ಆಯುಕ್ತರಿಗೆ ಪತ್ರ ಸಲ್ಲಿಸುವ ಮೂಲಕ ರಾಜೀನಾಮೆ ನೀಡಿದ್ದರು ಬಳಿಕ
ಪುರಸಭೆ ಸಹಾಯಕ ಆಯುಕ್ತರು ಆಡಳಿತದಲ್ಲಿತ್ತು ಇದೀಗ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದ್ದೂ ಪುರಸಭೆ ಕಾಂಗ್ರೆಸ್ ಸದಸ್ಯರಲ್ಲಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಸೃಷ್ಟಿಯಾಗಿದೆ .
ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಿರುವ ಅಧ್ಯಕ್ಷ
ಸ್ಥಾನಕ್ಕೆ ಕಾಂಗ್ರೆಸ್ ಮಹಿಳಾ ಸದಸ್ಯರಾದ 17ನೇ ವಾರ್ಡ್ ಸದಸ್ಯೆ ಕಾಶಿಮ್ ಬೀ, 08 ನೇ ವಾರ್ಡ್ ಸದಸ್ಯೆ ರಬಿಯ ಬೇಗಂ ಹುಸೇನ್ ಅಲ್ಲಿ,03ನೇ ವಾರ್ಡ್ ಸದಸ್ಯೆ ಅಮೀನ ಬೇಗಂ ಸೈಯದ್ ಸಾಬ್,
11ನೇ ವಾರ್ಡ್ ಸದಸ್ಯೆ ಮಹಾದೇವಮ್ಮ ಗುತ್ತೇದಾರ ಮಧ್ಯ ಭಾರಿ ಪೈಪೋಟಿ ನಡೆದಿದ್ದು ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ರವರ ನಿರ್ಣಾಯವೇ ಅಂತಿಮ ವಾಗಲಿದ್ದು ಅಧ್ಯಕ್ಷರ ಕುರ್ಚಿ ಯಾರ ಪಾಲಗಲಿದೆ ಎಂದು ಕೆಲವೇ ಗಂಟೆಗಳು ಕಾದು ನೋಡಬೇಕಿದೆ.