ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಗ್ರಾ ಪಂ ಸದಸ್ಯನೊಂದಿಗೆ ಸಂಬಂಧ ಹೊಂದಿದ್ದ ತಾಯಿಯೊಬ್ಬಳು ತನ್ನ ಮಗನ ಜೊತೆ ಸೇರಿ, ಇನ್ನೊಬ್ಬ ಮಗನನ್ನು ಕೊಲೆ ಮಾಡಿದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಕೊಪ್ಪಳ ಪೊಲೀಸ್ ತಂಡವೂ ಪ್ರಕರಣ ವನ್ನು ಶೀಘ್ರವೇ ಪತ್ತೆ ಹಚ್ಚಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದು, ಕೊಲೆ ಮಾಡಿ ಹೊಲದಲ್ಲಿ ಮುಚ್ಚಿ ಹಾಕಿದ್ದ ಮೃತ ದೇಹ ವನ್ನು ಶನಿವಾರದಂದು ಹೊರ ತೆಗೆಯುವ ಮೂಲಕ ಪ್ರಕರಣವನ್ನು ಸಾಬೀತು ಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಸಹಾಯಕ ಆಯುಕ್ತರಾದ ಬಸಪ್ಪ ಕಲ್ಲಶೆಟ್ಟಿ, ತಹಶಿಲ್ದಾರರ ರಾದ ಎಂ ಸಿದ್ದೇಶ, DYSP ಆರ್ ಎಸ್ ಉಜ್ಜನಕೊಪ್ಪ, CPI ಎನ್ ಆರ್ ನಿಂಗಪ್ಪ, ಸ್ಥಳೀಯ ಠಾಣಾಧಿಕಾರಿ ವೈಶಾಲಿ ಝಳಕಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
ಘಟನೆ ಹಿನ್ನೆಲೆ: ಗ್ರಾಪಂ ಮೆಂಬರ್ ನ ಪಲ್ಲಂಗದಾಟಕ್ಕೆ ಬದುಕಿ ಬಾಳಬೇಕಾದ ಬಡ ಯುವಕನೊಬ್ಬ ತನ್ನನ್ನು ಹೆತ್ತ ತಾಯಿಯಿಂದಲೇ ಹಾಗೂ ಬ್ರಷ್ಟ ಕಾಮುಕ ನಿಂದ ಕೊಲೆಯಾಗಿರುವುದು ಮನುಜ ಕುಲಕ್ಕೆ ನಂಬಲು ಅಸಾಧ್ಯ ವಾದರು, ಇದು ಸತ್ಯ ವಾಗಿರುವುದು ದುರದೃಷ್ಟಕರ.
ಪ್ರಕರಣ ಪತ್ತೆ ಹಚ್ಚಿದ ಪೊಲೀಸರಿಗೆ ಪ್ರಶಂಸೆ:- ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಪಿ ಹಾಗೂ ಡಿವಾಯ್ ಎಸ್ ಪಿ ಅವರ ಮಾರ್ಗದರ್ಶನದಲ್ಲಿ ಕುಷ್ಟಗಿ ಸಿಪಿಐ ಎನ್ ಆರ್ ನಿಂಗಪ್ಪ ನೇತೃತ್ವದ ತಂಡದ ತನಿಖೆಯಲ್ಲಿ ಸ್ಥಳೀಯ ಠಾಣೆಯ ಪಿಎಸ್ಐ ವೈಶಾಲಿ ಝಳಕಿ ಹಾಗು ಕುಷ್ಟಗಿ ಸಿಪಿಐ ವೃತ್ತದ ಎಎಸ್ಐ ದುರುಗಪ್ಪ ಹಾಗು ಜಯರಾಮ, ಸ್ಥಳೀಯ ಎಎಸ್ ಐ ಮಲ್ಲಪ್ಪ ವಜ್ರದ, ಸಿಬ್ಬಂದಿಗಳಾದ ಬಸವರಾಜ ಇಂಗಳದಾಳ, ಗುಂಡಪ್ಪ, ವೀರೇಶ, ಯಮನಪ್ಪ, ಕರಿಯಪ್ಪ, ಶಾರದಾ ಇವರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುವುದು ಕೊಪ್ಪಳ ಪೊಲೀಸ್ ಇಲಾಖೆಗೆ ಹೆಮ್ಮೆಯ ವಿಷಯವಾಗಿದೆ.