ನಾಗರಾಜ್ ಎಸ್ ಮಡಿವಾಳರ
ಮುದಗಲ್: ಸಮೀಪದ ನಾಗರಹಾಳ ಗ್ರಾಮಕ್ಕೆ ಪದವಿ ಪೂರ್ವ ಪರೀಕ್ಷೆ ನೀಡಲು ಮೂಲ ಸೌಲಭ್ಯದ ಕೊರತಯಿಂದಾಗಿ ನಾಗರಹಾಳ ಗ್ರಾಮ ಹಾಗೂ ಸುತ್ತಲಿನ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರದಿಂದ ವಂಚಿತರಾಗಬಹುದೇ?
ಪಿಯುಸಿ ಪರೀಕ್ಷೆ ಕೇಂದ್ರ ನೀಡುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ಪರೀಕ್ಷೆ ಕೇಂದ್ರ ಇರುವಲ್ಲಿ ಪೊಲೀಸ್ ಠಾಣೆ ಇರಬೇಕು. ಇದು ಅಲ್ಲದೇ ಮುಖ್ಯ ಅಂಚೆ ಕಚೇರಿ ಇರಬೇಕು. ಇವುಗಳು ಇಲದ ಕಾರಣದಿಂದಾಗಿ ನಾಗರಹಾಳ ಗ್ರಾಮದಲ್ಲಿ ನೂತನ ಪರೀಕ್ಷೆ ಕೇಂದ್ರ ನೀಡುವುದು ಡೌಟ್.
ಮುದಗಲ್ ಪರೀಕ್ಷೆ ಕೇಂದ್ರದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಇನ್ನೊಂದು ಪರೀಕ್ಷೆ ಕೇಂದ್ರ ನೀಡಬೇಕು ಎಂಬ ಬೇಡಿಕೆ ಇತ್ತು. ಆ ಬೇಡಿಕೆ ಮುದಗಲ್ ಪಟ್ಟಣದ ಎಬಿಸಿ ಕಾಲೇಜು ಎರಡು ತಿಂಗಳ ಹಿಂದೆಯೇ ಪರೀಕ್ಷೆ ಕೇಂದ್ರ ಮಾಡಿಕೊಂಡಿತ್ತು. ರಾಯಚೂರು ಡಿಡಿಪಿಯು ಅವರು ಬಂದು ಸ್ಥಳ ಪರಿಶೀಲನೆ ಮಾಡಿ ಪರೀಕ್ಷೆ ಕೇಂದ್ರ ನೀಡಲು ಸಿಫಾರಸ್ತು ಮಾಡಿದ್ದರು. ಅಂದೆ ಮುದಗಲ್ ಗೆ ಪರೀಕ್ಷೆ ಕೇಂದ್ರ ಮಂಜೂರಾಗಿತ್ತು.
ಪರೀಕ್ಷೆ ಕೇಂದ್ರಕ್ಕಾಗಿ ರಾಜಕೀಯ
ನಾಗರಹಾಳ ಗ್ರಾಮಕ್ಕೆ ಪಿಯುಸಿ ಪರೀಕ್ಷೆ ಕೇಂದ್ರ ನೀಡಿ ಎಂದು ಶಾಸಕರು ಪಿಯುಸಿ ನಿರ್ದೇಶಕರಿಗೆ ಪತ್ರ ನೀಡಿದ್ದರು ಎನ್ನಲಾಗಿದೆ. ಮುದಗಲ್ ಎಬಿಸಿ ಕಾಲೇಜಿಗೆ ಪರೀಕ್ಷೆ ಕೇಂದ್ರ ನೀಡಿದ್ದು ಅವರ ಗಮನದಲ್ಲಿ ಇದ್ದರೂ, ನಾಗರಹಾಳ ಗ್ರಾಮದ ಜನರ ಮುಂದೆ ಹೇಳದೆ ಸುಮ್ಮನೆ ಇದ್ದು, ಅದು ರಾಜಕೀಯ ಲಾಭ ಪಡೆದುಕೊಳ್ಳು ಮುಂದಾಗಿದ್ದಾರೆ ಎಂದು ಕೆಲ ಮುಖಂಡರು ದೂರಿದರು.
ನಾಗರಹಾಳ ಗ್ರಾಮಕ್ಕೆ ಪಿಯುಸಿ ಪರೀಕ್ಷೆ ಕೇಂದ್ರ ನೀಡುವುದಕ್ಕೆ ಮೂಲ ಸೌಲಭ್ಯದ ಕೊರತೆಯಿಂದಾಗಿಪರೀಕ್ಷೆ ಕೇಂದ್ರ ಸಿಗುವುದು ಸಾದ್ಯ ವಿಲ್ಲ ಎಂದು ಕೆಲ ಸರ್ಕಾರಿ ಕಾಲೇಜು ಪ್ರಾಚಾರ್ಯರು ಹಾಗೂ ಉಪನ್ಯಾಸಕರು ತಿಳಿಸಿದರು.