ವರದಿ ಎನ್ ಶಾಮೀದ್ ತಾವರಗೇರಾ
ಗಂಗಾವತಿ: ನಗರದ ದುರ್ಗಾ ಹೋಟೆಲ್ ನಲ್ಲಿ 17-02-2022 ರಂದು ರಾತ್ರಿ ನಡೆದ ಮಾರಣಾಂತಿಕ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿರುವ ಕ್ರಮಕ್ಕೆ ಪೊಲೀಸ್ ರ ಕಾರ್ಯವೈಖರಿ ಯನ್ನು ಮೆಚ್ಚಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗುಶ ಗಿರಿ ಸೂಕ್ತ ಬಹುಮಾನ ಘೋಷಿಸಿದ್ದಾರೆ..
ಘಟನೆ ವಿವರ: ನಗರದ ಇಮ್ತಿಯಾಜ ಶೇಖ ಹಾಗೂ ಸ್ನೇಹಿತರು ಊಟಕ್ಕೆ ಕುಳಿತಾಗ ಇನ್ನೊಂದು ಗುಂಪಿನವರು ಮಾರಣಾಂತಿಕ ಹಲ್ಲೆ ನಡೆಸಿದ್ದು ಚಾಕು ಹಾಗೂ ಕ್ರಿಕೇಟ್ ಸ್ಟಂಪ್ ನಿಂದ ಹಲ್ಲೆ ಮಾಡಿದ ಬಗ್ಗೆ ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಯು ಸಾಮಾಜಿಕ ಜಾಲತಾಣದಲ್ಲಿ ವೃರಲ್ ಆಗಿದ್ದು, ಈ ಪ್ರಕಣರವನ್ನು ಗಂಭೀರವಾಗಿ ಪರಿಗಣಿಸಿ ಡಿಎಸ್ ಪಿ ಆರ್ ಎಸ್ ಉಜ್ಜನಕೊಪ್ಪ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ 12 ಜನ ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಡಿಎಸ್ ಪಿ ಆರ್ ಎಸ್ ಉಜ್ಜನಕೋಪ್ಪ ನಗರ ಠಾಣೆಯ ಪಿ ವೆಂಕಟಸ್ವಾಮಿ, ಚಂದಪ್ಪ ಚಿಕ್ಕೊಡಿ ಪಿಐ, ಶಹನಾಜ ಬೆಗಂ ಪಿಎಸ್ಐ (ಕ್ರೈಂ) ಹಾಗೂ ವಿಶೇಷ ತಂಡದ ಪೊಲೀಸ್ ಸಿಬ್ಬಂದಿಗಳಾದ , ಜಿರಂಜಿವಿ, ಮರಿ ಶಾಂತವೀರ ಗೌಡ, ಮೈಲಾರಪ್ಪ, ಮಹೇಶ, ರಮೇಶ ಗ್ಯಾನಪ್ಪ, ಅಯ್ಯನಗೌಡ, ಮುತ್ತುರಾಜ ಮತ್ತು ಸಿಡಿ ಆರ್ ತಂಡದ ಸಿಬ್ಬಂದಿ ಪ್ರಸಾದ ಹಾಗೂ ಕೊಟೇಶ್ವರ ಅವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರಾ ಅರುಣಾಂಗುಶ ಗಿರಿ ಅವರು ಶ್ಲಾಘಿಸಿ ಸೂಕ್ತ ಬಹುಮಾನ ಮಂಜೂರುಮಾಡಿದ್ದಾರೆ.