ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ; ಪಟ್ಟಣದಲ್ಲಿ ಸಂವಿಧಾನ ರಕ್ಷಣಾ ಸಮಿತಿಯವರಿಂದ ನಡೆಯುತ್ತಿರುವ 5 ನೇ ದಿನದ ಉಪವಾಸ ಸತ್ಯಾಗ್ರಹದಲ್ಲಿ 3 ಜನ ಕೇಶ ಮುಂಡನೆ ಮಾಡುವ ಮೂಲಕ ನ್ಯಾಯಾಧೀಶರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ ಪ್ರಸಂಗ ಜರುಗಿತು. ಧರಣಿ ನಿರತರಾದ ಹೇಮರಾಜ ವೀರಾಪುರ, ರಾಜಾ ನಾಯಕ, ಸುರೇಶ ಕಂಬನಿ ಕೇಶ ಮುಂಡನೆ ಮಾಡುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಹಲವಾರು ಸಮಾಜದವರು ಸತ್ಯಾಗ್ರಕ್ಕೆ ಬೆಂಬಲ ನೀಡಿದರು, ಈ ಕುರಿತು ತಕ್ಷಣವೇ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಧರಣಿ ನಿರತರು ಎಚ್ಚರಿಸಿದರು.