ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪಟ್ಟಣದ ಆರಾಧ್ಯದೈವ ಶ್ರೀ ತ್ರೀ ವೀರಭದ್ರೇಶ್ವರ ಜಾತ್ರೆಯ ರಥೋತ್ಸವ ವು ಸೋಮವಾರ ಬೆಳಗಿನ ಜಾವ 6.ಗಂಟೆಗೆ ನಡೆಯಲಿದೆ ಎಂದು ಜಾತ್ರಾ ಸಮಿತಿಯು ತಿಳಿಸಿದೆ.
ಕರೊನಾ ಹಿನ್ನಲೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಡ್ಡಾಯ ನಿಯಮ ಪಾಲಿಸುವದರ ಜೊತೆಗೆ ಸರಳ ಹಾಗೂ ಸಾಂಕೇತಿಕ ಸಂಪ್ರದಾಯದಂತೆ ಜರುಗಲಿದ್ದು ಗುಗ್ಗಳ ಹಾಗೂ ಕಳಸಾರೋಹಣ ಬೆಳಗಿನ ಜಾವ 4 ಗಂಟೆಯಿಂದಲೇ ಪ್ರಾರಂಭವಾಗುವುದು ಭಕ್ತಾದಿಗಳು ಸರ್ಕಾರದ ನಿಯಮದಂತೆ ಕಡಿಮೆ ಜನರು ಪಾಲ್ಗೊಂಡು ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯವಾಹಿನಿಯ ವಿಶೇಷ ಸೂಚನೆ: ಕಡ್ಡಾಯವಾಗಿ ಭಕ್ತಾದಿಗಳೆಲ್ಲರೂ, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.