ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮನೆ ಹಾಗೂ ನಿವೇಶನ ಗಳ ಖಾತಾ ನಕಲು (ನಮೂನೆ-3) ಪತ್ರ ನೀಡದಿರುವದರಿಂದಾಗಿ ಮದ್ಯಮ ವರ್ಗದವರು ಸಾಕಷ್ಟು ತೊಂದರೆಯಲ್ಲಿ ಸಿಲುಕಿದ್ದು ಈ ಬಗ್ಗೆ ಸರ್ಕಾರದ ಆದೇಶದ ವಿರುದ್ದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದ್ಯಮ ವರ್ಗದ ಜನರು ಮಕ್ಕಳ ಮದುವೆ ಹಾಗೂ ವಿದ್ಯಾಭ್ಯಾಸ ಕ್ಕಾಗಿ ಈ ಹಿಂದೆ ಖರೀದಿಸಿದ್ದ ಆಸ್ತಿಗಳನ್ನು ಮಾರಾಟ ಮಾಡಲು ನಮೂನೆ-3 ಫಾರ್ಮ್ ಅನ್ನು ಪಟ್ಟಣ ಪಂಚಾಯುತಿ ವತಿಯಿಂದ ಪಡೆಯಬೇಕಾಗಿದ್ದು ಕಳೆದ ಎರಡು ತಿಂಗಳಿನಿಂದ ಜಿಲ್ಲಾಧಿಕಾರಿಗಳ ಆದೇಶದಿಂದಾಗಿ ನಮೂನೆ-3 ಫಾರ್ಮ್ ಅನ್ನು ನೀಡುತ್ತಿಲ್ಲ ಇದರಿಂದಾಗಿ ಬ್ಯಾಂಕ್ ನವರು ಸಾಲ ನೀಡಲು ಮುಂದಾಗುತ್ತಿಲ್ಲ ಹಾಗೂ ನಿವೇಶನ ಖರೀದಿದಾರರು ಕೂಡ ನಿವೇಶನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.
ಇದರಿಂದಾಗಿ ಬಡ, ಮಧ್ಯಮ ವರ್ಗದವರಿಗೆ ತೀವ್ರ ಅನ್ಯಾಯವಾಗಿದ್ದು ವಿದ್ಯಾರ್ಥಿಗಳ ಅಭ್ಯಾಸದ ತೊಂದರೆ ಜೊತೆಗೆ, ನಿಶ್ಚಿತ ವಾಗಿರುವ ಮದುವೆಗಳು ಕೂಡ ಮುರಿದು ಹೋಗುವ ಪರಿಸ್ಥಿತಿ ಗೆ ಬಂದಿದ್ದರು ಕೂಡ ಯಾರೊಬ್ಬ ಜನ ಪ್ರತಿನಿಧಿಗಳು ಗಮನ ಹರಿಸದಿರುವುದು ಕಂಡು ಬಂದ್ದಿದ್ದು , ಸರ್ಕಾರ ಹಾಗೂ ಸಂಬಂಧಿಸಿದ ಜಿಲ್ಲಾಧಿಕಾರಿ ಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಸಾರ್ವಜನಿಕರು ಹೋರಾಟ ಮಾಡುವದಾಗಿ ಸ್ಥಳೀಯ ನಾಗರಿಕಾ ಸೇವಾ ಸಮಿತಿಯ ಮುಖಂಡರು ಎಚ್ಚರಿಸಿದ್ದಾರೆ. ತಕ್ಷಣವೇ ಜಿಲ್ಲಾಧಿಕಾರಿ ಗಳು ಈ ಬಗ್ಗೆ ಗಮನ ಹರಿಸಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸುವಲ್ಲಿ ಮುಂದೆ ಬರಬೇಕಾಗಿ ಒತ್ತಾಯಿಸಿದ್ದಾರೆ.