ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡರ ವಿರುದ್ಧ ಪಟ್ಟಣದ 19 ಸಂಘಟನೆಗಳಿಂದ ಬುಧವಾರ ಮುದಗಲ್ ಪಟ್ಟಣ ಬಂದ್ ಕರೆ ನೀಡುವೆ.
ಪಟ್ಟಣದ ವಿಜಯಮಹಾಂತೇಶ್ವರ ಮಠದಲ್ಲಿ 19 ಸಂಘಟನೆಗಳ ಒಕ್ಕೂಟದ ಸಭೆ ನಡೆಯಿತು
ಸಭೆಯಲ್ಲಿ ಒಕ್ಕೂಟದ ಪರವಾಗಿ ಮಾತನಾಡಿದ ರಾಘವೇಂದ್ರ ಕುದರಿ ಕಳೆದ ಜನವರಿ 26 ರಂದು ರಾಯಚೂರಿನಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆ ವೇಳೆ ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಡಾ.ಬಿ ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಇದು ಇಡೀ ಸಮಾಜವೇ ತಲೆ ತಗ್ಗಿಸುವ ವಿಚಾರ ನಾವೆಲ್ಲ ಸ್ವಯಂ ಪ್ರೇರಿತರಾಗಿ ಮುದಗಲ್ ಪಟ್ಟಣವನ್ನ ಬಂದ್ ಮಾಡುವ ಮೂಲಕ
ನ್ಯಾಯಾಧೀಶರ ವಿರುದ್ಧ ದೇಶ ದ್ರೋಹಿ ಪ್ರಕರಣ ದಾಖಲು ಮಾಡುವಂತೆ ಸರಕಾರಕ್ಕೆ ಒತ್ತಾಯ ಮಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡೋಣ ಎಂದರು.
ಮುದಗಲ್ಲಿನ ಡಿ ಎಸ್ ಎಸ್, ಭಾರತೀಯ ದಲಿತ ಪ್ಯಾಂಥರ, ವ್ಯಾಪಾರಸ್ಥರ ಸಂಘ,ಬಿದಿ ಬದಿ ವ್ಯಾಪಾರಸ್ಥರ ಸಂಘ,ಜೈಭೀಮ್ ಯುವ ಘರ್ಜನೆ ,ಎಸ್ ಡಿ ಪಿ ಐ,ವಿಕಲ ಚೇತನರ ಸಂಘ,ಮಾದಿಗ ಮಹಾ ಸಭಾ,ಭಗೀರಥ ಮಹಾ ಸಭಾ,ಹಮಾಲಿ ಕಾರ್ಮಿಕರ ಸಂಘ,ಗೂಡ್ಸ್ ವಾಹನ ಸಂಘ,ಟ್ಯಾಕ್ಷಿ ವಾಹನ ಚಾಲಕರ ಸಂಘ,ಕರುನಾಡ ವಿಜಯ ಸೇನೆ,ಕರ್ನಾಟಕ ರಕ್ಷಣೆ ವೇದಿಕೆ,ಮಹರ್ಷಿ ವಾಲ್ಮೀಕಿ ಯುವ ವೇದಿಕೆ,ದೇವದಾಶಿ ಮಹಿಳಾ ಸಂಘ ,ಚಲುವಾದಿ ಮಹಾ ಸಭಾ,ಭೀಮ ವಾದ ಸಂಘಟನೆ, ಅಂಬೇಡ್ಕರ್ ವಾದ ಸಂಘಟನೆ ಸೇರಿ 19 ಸಂಘಟನೆಗಳ ಬೆಂಬಲ ದೊಂದಿಗೆ ಇದೆ 02-02-2022ಬುಧವಾರದಂದು ಮುದಗಲ್ ಪಟ್ಟಣ ಸಂಪೂರ್ಣ ಬಂದ್ ಗೆ ಕರೆ ನೀಡಿವೆ