ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡರ ವಿರುದ್ಧ ಪಟ್ಟಣದ ವಿವಿಧ ಸಂಘಟನೆಗಳಿಂದ ರಾಜ್ಯ ಹೆದ್ದಾರಿಯನ್ನ ಕೆಲ ಸಮಯ ತಡೆದು ಪ್ರತಿಭಟನೆ ಮಾಡಿದರು. ಜನವರಿ 26 ರಂದು ರಾಯಚೂರಿನಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆ ವೇಳೆ ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡರು
ದ್ವಜಾರೋಹಣ ಮಾಡಬೇಕಾಗಿರುತ್ತದೆ ಆದರೆ ಅವರು ಅಂಬೇಡ್ಕರ್ ರವರ ಪೋಟೋ ತೆಗೆದು ಹೊರಗಿಟ್ಟರೆ ಮಾತ್ರ ದ್ವಜಾರೋಹಣ ಮಾಡುತ್ತೇನೆ ಇಲ್ಲದಿದ್ದರೆ ದ್ವಜಾರೋಹಣ ಮಾಡುವುದಿಲ್ಲ ಎನ್ನುವ ಮೂಲಕ ಡಾ.ಬಿ ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಪಟ್ಟಣದ ಭಾರತೀಯ ದಲಿತ ಪ್ಯಾಂಥರ್ ನಗರ ಘಟಕ, ಕರುನಾಡು ವಿಜಯಸೇನೆ, ಎಸ್ ಡಿ ಪಿ ಐ ಸಂಘಟನೆ, ಅಂಬೇಡ್ಕರ್ ಜೈ ಭೀಮ್ ಯುವ ಘರ್ಜನೆ ಸಂಘಟನೆಗಳು ನ್ಯಾಯಾಧೀಶರ ವಿರುದ್ಧ ಕೊಡಲೇ ದೇಶದ್ರೋಹದ ಪ್ರಕರಣ ದಾಖಲು ಮಾಡಬೇಕು ಎಂದು ರಸ್ತೆ ತಡೆದು ನಾಡ ತಹಶೀಲ್ದಾರ ತುಳಜಾ ರಾಮಸಿಂಗ್ ರ ಮೂಲಕ ಬೆಂಗಳೂರು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಭಾರತೀಯ ದಲಿತ ಪ್ಯಾಂಥರ್ ನಗರ ಘಟಕದ ಅಧ್ಯಕ್ಷರ ಕೃಷ್ಣ ಚಲುವಾದಿ, ಕರುನಾಡು ವಿಜಯಸೇನೆ ಘಟಕದ ಅಧ್ಯಕ್ಷ ಮೌನೇಶ ಚಲುವಾದಿ, ಎಸ್ ಡಿ ಪಿ ಐ ಸಂಘಟನೆ ಅಧ್ಯಕ್ಷ ರಫಿ , ರಾಘು ಕುದುರೆ, ರಘುವೀರ ಚಲುವಾದಿ, ಹನುಮೇಶ ವಾಲ್ಮೀಕಿ, ಮಹಾಂತೇಶ ಚಲುವಾದಿ ಸೇರಿದಂತೆ ಇನ್ನಿತರರು ಇದ್ದರು.